ಕಲ್ಲುಮುಟ್ಲು : ರವಿಪ್ರಕಾಶ್-ಅನಂತೇಶ್ವರಿ ದಂಪತಿಯ ವೈವಾಹಿಕ ಬೆಳ್ಳಿ ಹಬ್ಬದ ಆಚರಣೆ

0

ಸುಳ್ಯ ಕಸಬಾದ
ಕಲ್ಲುಮುಟ್ಲು ನಿವಾಸಿ ಹೋಟೆಲ್ ಕರಾವಳಿಯ ಮಾಲಕ ರವಿಪ್ರಕಾಶ್ ಕಲ್ಲುಮುಟ್ಲು ಮತ್ತು ಶ್ರೀಮತಿ ಅನಂತೇಶ್ವರಿ ದಂಪತಿಯ 25 ನೇ ವರ್ಷದ ವೈವಾಹಿಕ ಬೆಳ್ಳಿ ಹಬ್ಬದ ಆಚರಣೆಯನ್ನು ಕಲ್ಲುಮುಟ್ಲು ಮನೆಯಲ್ಲಿ ಡಿ.5 ರಂದು ಆಚರಿಸಲಾಯಿತು.
ಬೆಳಗ್ಗೆ ಪುರೋಹಿತ್ ಪ್ರವೀಣ್ ಶಿಬರೂರಾಯ ರವರ ನೇತೃತ್ವದಲ್ಲಿ ಗಣಪತಿ ಹವನ ಹಾಗೂ ಶ್ರೀ ಸತ್ಯನಾರಾಯಣ ದೇವರ ಪೂಜೆಯು ನೆರವೇರಿತು. ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಯಿತು. ನೂರಾರು ಮಂದಿ ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಆಗಮಿಸಿ ದಂಪತಿಯವರಿಗೆ ಶುಭ ಹಾರೈಸಿದರು. ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಯಿತು.