ಯುವವಾಹಿನಿ ಸುಳ್ಯ ಘಟಕದ ಪದಗ್ರಹಣ ಸಮಾರಂಭ

0
302

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಸುಳ್ಯ ಘಟಕ ಇದರ 2022 – 23 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸುಳ್ಯ ದೇವಮ್ಮ ಕಾಂಪ್ಲೆಕ್ಸ್ ಸಭಾಭವನದಲ್ಲಿ ನಡೆಯಿತು. ಬಿಲ್ಲವ ಸಂಘ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಯಾದ ನವೀನ್ ಸಾರಕೆರೆ ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಘಾಟಿಸಿ ಶುಭ ಹಾರೈಸಿದರು. ಕೇಂದ್ರ ಸಮಿತಿಯ ಉಪಾಧ್ಯಕ್ಷರು ಹಾಗೂ ನಿಯೋಜಿತ ಅಧ್ಯಕ್ಷರಾದ ರಾಜೇಶ್ ಬಂಟ್ವಾಳ ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಭೋದಿಸಿ ಶುಭ ಹಾರೈಸಿದರು.
ಡಿಸೆಂಬರ್ 25 ರಂದು ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಮುಲ್ಕಿ ಘಟಕದ ಆತಿಥ್ಯದಲ್ಲಿ ನಡೆಯುತ್ತಿರುವ 35ನೇ ವಾರ್ಷಿಕ ಸಮಾವೇಶ ಹಾಗೂ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಸುಳ್ಯ ಘಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

p>

ವೇದಿಕೆಯಲ್ಲಿ ಘಟಕದ ಸ್ಥಾಪಕ ಅಧ್ಯಕ್ಷ ಶಿವಪ್ರಸಾದ್, ಸುಳ್ಯ ಘಟಕದ ಅಧ್ಯಕ್ಷರು ಅನಿಲ್ ಪೂಜಾರಿ ಕುತ್ಯಾಡಿ ಹಾಗೂ ನೂತನ ಅಧ್ಯಕ್ಷ ಲೋಹಿತ್ ರೆಂಜಾಳ ಹಾಗೂ ಕಾರ್ಯದರ್ಶಿ ಮಹೇಶ್ ಬೆಳ್ಳಾರೆ ಉಪಸ್ಥಿತರಿದ್ದರು. ಕಡಬ ಘಟಕದ ನಿಕಟಪೂರ್ವ ಅಧ್ಯಕ್ಷರು ಪ್ರವೀಣ್ ಓಂಕಲ್ ಹಾಗೂ ಅಧ್ಯಕ್ಷ ಕೃಷ್ಣಪ್ಪ ಅಮೈ ಆಗಮಿಸಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಚಂದ್ರಶೇಖರ ಪೂಜಾರಿ ಹೈದಂಗೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು,ಮಹೇಶ್ ಬೆಳ್ಳಾರೆ ವಂದಿಸಿದರು.ಯುವವಾಹಿನಿ ಸುಳ್ಯ ಘಟಕದ ಪೂರ್ವಾಧ್ಯಕ್ಷರು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here