ಕಿಶೋರ್ ಅರಂಪಾಡಿ ಜೆಡಿಎಸ್ ಸೇರ್ಪಡೆ

0

ಸುಬ್ರಹ್ಮಣ್ಯ ಗ್ರಾ.ಪಂ ನ ಮಾಜಿ ಸದಸ್ಯ ಕಿಶೋರ್ ಅರಂಪಾಡಿ ನ. 28ಕ್ಕೆ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಸುಳ್ಯದಲ್ಲಿ ನಡೆದ ಜೆಡಿಎಸ್ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದು ಈ ಸಂದರ್ಭ ಕಡಬ ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ತಿಲಕ್ ವೈ, ದಿನೇಶ್ ಎಂ ಪಿ, ಶಿವರಾಮ, ದುಗ್ಗಪ್ಪ, ನಾರಾಯಣ ಅಗ್ರಹಾರ ಮತ್ತಿತರರು ಉಪಸ್ಥಿತರಿದ್ದರು. ಕಿಶೋರ್ ಅರಂಪಾಡಿ ಅವರನ್ನು ಸುಬ್ರಹ್ಮಣ್ಯ, ಏನೆಕಲ್ಲು, ಬಳ್ಪ, ಐನೆಕಿದು, ಬಿಳಿನೆಲೆ ಗ್ರಾಮಗಳನ್ನೊಲಗೊಂಡಂತೆ ವಲಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.