ಡಿ.9 : ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ, ಶಾಸಕರ ವಿಶೇಷ ಅನುದಾನದಿಂದ ಸುಳ್ಯ ನಗರಾಭಿವೃದ್ಧಿಗೆ 5 ಕೋಟಿ ಬಿಡುಗಡೆ: ವಿನಯ ಕುಮಾರ್ ಕಂದಡ್ಕ

0

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಇನ್ನಿತರ ಅಭಿವೃದ್ಧಿ ಕೆಲಸಗಳಿಗೆ ಶಾಸಕರ ವಿಶೇಷ ಅನುದಾನ ದಿಂದ 5 ಕೋಟಿ ಅನುದಾನ ‌ಬಿಡುಗಡೆಯಾಗಿದ್ದು 2ಕೋಟಿ 80 ಲಕ್ಷ ಮೊತ್ತದ ಕಾಮಗಾರಿಗೆ ಚಾಲನೆ ಕಾರ್ಯಕ್ರಮ ಡಿ.9 ರಂದು ನಡೆಯಲಿದೆ ಅದರೊಂದಿಗೆ 17 ಕೋಟಿ ವೆಂಟೆಡ್ ಡ್ಯಾಮ್ ಕಾಮಗಾರಿಗೆ ಕೆಲಸಕ್ಕೆ ಚಾಲನೆ ದೊರಕಲಿದೆ.
ಸುಳ್ಯ ನಗರ ವ್ಯಾಪ್ತಿಯ ಕೊರಂಬಡ್ಕ- ನಾರಾಜೆ ಪ.ಜಾತಿ ಕಾಲನಿ ಸಂಪರ್ಕ ರಸ್ತೆ ಅಭಿವೃದ್ಧಿ,ಶಾಂತಿನಗರ ಬಾಣರಗುಡ್ಡೆ -ಕುದ್ಪಾಜೆ-ದುಗಲಡ್ಕ-ನೀರಬಿದಿರೆ ಪ.ಜಾತಿ ಕಾಲನಿಗಳ ರಸ್ತೆ ಅಭಿವೃದ್ಧಿ.
ಬೂಡು ಪ.ಜಾತಿ ಕಾಲನಿ- ನಾವೂರು ಕಾಲನಿ ಸಂಪರ್ಕ ರಸ್ತೆ, ಸೂರ್ತಿಲ ಆಶ್ರಯ ಕಾಲನಿಯಿಂದ ಗೋಪಾಲ ಅಜಿಲರವರ ಮನೆ ಕಡೆ ಹೋಗುವ ಪ.ಜಾತಿ‌ ಕಾಲನಿ ರಸ್ತೆ ಅಭಿವೃದ್ಧಿ.

ಪರಿವಾರಕಾನ ಪರಿಶಿಷ್ಟ ಪಂಗಡ ಕಾಲನಿ ರಸ್ತೆ ಅಭಿವೃದ್ಧಿ, ಕುರುಂಜಿ- ಭಸ್ಮಡ್ಕ ಪರಿಶಿಷ್ಟ ಪಂಗಡದ ಹಾಗೂ ಕುಕ್ಕಾಜೆಕಾನ ಪರಿಶಿಷ್ಟ ಪಂಗಡ ಹಾಗೂ ಕುಕ್ಕಾಜೆ ಕಾನ ಪರಿಶಿಷ್ಟ ಪಂಗಡದವ ಮನೆ ಕಡೆವ ರಸ್ತೆ ಅಭಿವೃದ್ಧಿ. ಬೆಟ್ಟಂಪಾಡಿ ಆಶ್ರಯ ಕಾಲನಿ,ಸೂರ್ತಿಲ,ಕೊರಂಬಡ್ಕ ಅಶ್ರಯ ಕಾಲನಿ ಅಡ್ಡ ರಸ್ತೆಗಳ ಹಾಗೂ ಕೊಡಿಯಾಲಬೈಲ್ ಬ್ರಹ್ಮರಗಯ ರಸ್ತೆ ಚರಂಡಿ ಅಭಿವೃದ್ಧಿ,
ದುಗಲಡ್ಕ ಕೊಯಿಕುಳಿ ಶಾಲಾ ಕಡೆ ರಸ್ತೆ ಅಭಿವೃದ್ಧಿ, ದಕ್ಷಿಣ ಬೀರಮಂಗಿಲ ಹಾಗೂ ಜಟ್ಟಿಪಳ್ಳ ಕಾನತ್ತಿಲ ರಸ್ತೆ ಅಭಿವೃದ್ಧಿ, ಕೇರ್ಪಳ ಭಗವತಿ ದೇವಸ್ಥಾನ ದ್ವಾರದಿಂದ ಕೇರ್ಪಳ ಕಟ್ಟೆಯ ಕಡೆಗೆ ರಸ್ತೆ ಅಭಿವೃದ್ಧಿ, ಕೆರೆಮೂಲೆಯಿಂದ ಬೂಡು ನೂತನ ಸಂಪರ್ಕ ರಸ್ತೆ ಅಭಿವೃದ್ಧಿ, ಗಾಂಧಿನಗರ ಶಾಲಾ ಹಿಂಬದಿಯ ಬಲಗಡೆ ರಸ್ತೆ ,ಕಾಯರ್ತೋಡಿ ನಡುಮುಟ್ಲು ರಸ್ತೆ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಹಿಂಭಾಗದ ರಸ್ತೆ ಮತ್ತು ಕನಿಕರಪಳ್ಳದಿಂದ ಕೋಡಿ ಕುಶಾಲಪ್ಪರ ಮನೆ ಕಡೆ ರಸ್ತೆ,ತಾಲೂಕು ಪಂಚಾಯತ್ ಕಛೇರಿ ಹಿಂಭಾಗದ ರಸ್ತೆ ಮತ್ತು ಅಂಬಟಡ್ಕ ವೆಂಕಟರಮಣ ದೇವಸ್ಥಾನ ಮುಂಭಾಗದ ರಸ್ತೆ,ಕೆ ಹೆಚ್ ಬಿ ಕಾಲನಿಯ ಒಂದು ಮತ್ತು ಎರಡನೇ ರಸ್ತೆ ,ಜಯನಗರ ಶಾಲಾ ಬದಿಯ ರಸ್ತೆ ಅಭಿವೃದ್ಧಿ, ಆಯುರ್ವೇದ ಕಾಲೇಜಿನಿಂದ ವಿವೇಕಾನಂದ ವೃತದ ಕಡೆಗೆ ಹಾಗೂ ವಿವೇಕಾನಂದ ವೃತದಿಂದ ಕಾಂತಮಂಗಿಲ ರಸ್ತೆ ಬದಿ ಅಂಬಟಡ್ಕ ದೇವಸ್ಯ ರಸ್ತೆ ಬದಿ ಮತ್ತು ಎಸ್ ವಿ ಯಂ ಅಸ್ಪತ್ರೆ ಹಿಂಭಾಗಕ್ಕೆ ಹರಿಯುವ ಮಳೆ ನೀರು ಚರಂಡಿ ಅಭಿವೃದ್ಧಿ ಹಾಗೂ ಮೋರಿ ರಚನೆ ಕಾಮಗಾರಿ ಕೆಲಸಗಳು ‌ನಡೆಯಲಿದೆ ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯ ಕಂದಡ್ಕ ಡಿ.6 ರಂದು ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಲ್ಚರ್ಪೆ ಕಸದಿಂದ ಗ್ಯಾಸ್ ಉತ್ಪಾದನೆ
ಪೆರಾಜೆಯಲ್ಲಿರುವ ನಗರ ಪಂಚಾಯತ್ ಕಸ ವಿಲೇವಾರಿ ಘಟಕದಲ್ಲಿ ಗ್ಯಾಸ್ ಉತ್ಪಾದಿಸಿ ಅದರಿಂದ ವಿದ್ಯುತ್ ಆಗಿ ಪರಿವರ್ತನೆ ಮಾಡಿ ಅಲ್ಲಿ ಎಲ್ಲಾ ಯಂತ್ರೋಪಕರಣಗಳು ಕೆಲಸ ಅದರಿಂದ ಆಗುವಂತ ವ್ಯವಸ್ಥೆಯಾಗಿದೆ.
ಮುಂದೆ ಗ್ಯಾಸ್ ಉತ್ಪಾದಿಸಿ ಸಿಲಿಂಡರ್ ಮೂಲಕ ಮಾರುಕಟ್ಟೆ ‌ಕೊಡುವಂತಹ ಯೋಜನೆಯನ್ನು ಹಮ್ಮಿಕೊಂಡಿದೆವೇ.
ಇದು ರಾಜ್ಯದಲ್ಲೇ ಮೊದಲ ಪ್ರಯೋಗ ಖಂಡಿತ ಯಶಸ್ವಿಯಾಗುತ್ತದೆ ಎಂದವರು ಹೇಳಿದರು.
ಅದೇ ದಿನ ಅರೋಗ್ಯ ಇಲಾಖೆ ವತಿಯಿಂದ ಸುಸಜ್ಜಿತ ಶವಗಾರ,ಆಕ್ಸಿಜನ್ ಘಟಕ, ಅತ್ಯಾಧುನಿಕ ಲ್ಯಾಬ್,ಅಸ್ಪತ್ರೆಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್, ಸಚಿವ ಅಂಗಾರ ರವರು ಚಾಲನೆ ಮಾಡಲಿದ್ದಾರೆ ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ತಿಳಿಸಿದರು.

ದುಗಲಡ್ಕ ರಸ್ತೆ 50 ಲಕ್ಷ ಕಾಮಗಾರಿ ಪೂರ್ಣ ಹೆಚ್ಚುವರಿ 50 ಲಕ್ಷ ವಿಶೇಷ ಅನುದಾನ ಬಿಡುಗಡೆ
ದುಗಲಡ್ಕ ರಸ್ತೆ 50 ಲಕ್ಷ ಕಾಮಗಾರಿ ಪೂರ್ಣಗೊಂಡು ಇದೀಗ ಶಾಸಕರ ವಿಶೇಷ ಅನುದಾನದಿಂದ50 ಲಕ್ಷ ಬಿಡುಗಡೆಯಾಗಿದೆ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ.
ಸುಳ್ಯ ನಗರದಲ್ಲಿ 3 ಕೋಟಿ ಕಾಮಗಾರಿ ಪೂರ್ಣ
ಸುಳ್ಯ ನಗರದ ವಿವಿಧ ವಾರ್ಡ್ ಗಳಲ್ಲಿ ಶಾಸಕರ ವಿಶೇಷ ಅನುದಾನದಿಂದ ಬಿಡುಗಡೆಯಾದ ಮೂರು ಕೋಟಿ ಮೊತ್ತದ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ ಅದರಲ್ಲಿ ಒಂದು ರಸ್ತೆಯ ಕಾಮಗಾರಿ ಬಾಕಿ ಉಳಿದಿದೆ ಅದನ್ನು ಅತೀ ಶ್ರೀಘ್ರದಲ್ಲಿ ಮಾಡಿ ಮುಗಿಸಲಿದ್ದೇವೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಪಂಚಾಯತ್ ಉಪಾಧ್ಯಕ್ಷ ಸರೋಜಿನಿ ಪೆಲ್ತಡ್ಕ,ಸ್ಥಾಯಿ ಸಮಿತಿ ಅಧ್ಯಕ್ಷ ಶೀಲಾವತಿ ಅರುಣಾ ಕುರುಂಜಿ,ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಉಪಸ್ಥಿತರಿದ್ದರು