ಮೊಗರ್ಪಣೆ ಜಮಾಅತ್ ವ್ಯಾಪ್ತಿಯ ಮತದಾರರ ಪಟ್ಟಿ ಪರಿಶೀಲನೆ ಹಾಗೂ ಸೇರ್ಪಡೆ ಅಭಿಯಾನ, ಅಭಿಯಾನಕ್ಕೆ ಸುಳ್ಯ ತಹಶೀಲ್ದಾರ್ ಕು.ಅನಿತಾಲಕ್ಷ್ಮಿ ಚಾಲನೆ

0

ಸುಳ್ಯ ಮೊಗರ್ಪಣೆ ಜಮಾಅತಿಗೆ ಸಂಬಂಧಪಟ್ಟ ಮತದಾರರ ಪಟ್ಟಿ ಪರಿಶೀಲನೆ ಮತ್ತು ಹೊಸ ಮತದಾರರ ಸೇರ್ಪಡೆ, ವರ್ಗಾವಣೆ ಇತ್ಯಾದಿ ಕಾರ್ಯಕ್ರಮಗಳ ಅಭಿಯಾನ ಇಂದು ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾತ್ ಕಮಿಟಿ ಕಚೇರಿಯಲ್ಲಿ ನಡೆಯಿತು.
ಸುಳ್ಯ ತಹಶೀಲ್ದಾರ್ ಕು. ಅನಿತಾ ಲಕ್ಷ್ಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮತದಾನ ಜಾಗೃತಿ ಕುರಿತು ಮಾಹಿತಿ ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು ಆಗಿದೆ. ಮತದಾನದ ಜಾಗೃತಿ ಅಭಿಯಾನದಲ್ಲಿ ಸುಳ್ಯದ ವಿವಿಧ ಭಾಗಗಳಲ್ಲಿ ಸಂಬಂಧಪಟ್ಟ ಬಿ ಎಲ್ ಓ ಗಳು ಅಧಿಕಾರಿಗಳು ಸಂಪೂರ್ಣವಾಗಿ ತೊಡಗಿಕೊಂಡಿದ್ದು, ಇದೀಗ ಜಮಾತ್ ಕಮಿಟಿಯವರು ಈ ರೀತಿಯ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿರುವುದು ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘನೆ ನೀಡಿದರು. ಸ್ಥಳೀಯ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ಸೀ ಫುಡ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.


ವೇದಿಕೆಯಲ್ಲಿ ಜಯನಗರ ವಾರ್ಡಿನ ಬಿ ಎಲ್ ಓ ಅಂಗನವಾಡಿ ಶಿಕ್ಷಕಿ ಶ್ರೀಮತಿ ತಿರುಮಲೇಶ್ವರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮಸೀದಿ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿ, ಮದರಸ ಸದರ್ ಮುಅಲ್ಲಿಮ್ ಮಹಮ್ಮದ್ ಸಕಾಫಿ, ಜಮಾತ್ ಕಮಿಟಿಯ ಉಪಾಧ್ಯಕ್ಷರುಗಳಾದ ಸಿಎಂ ಉಸ್ಮಾನ್, ಹಾಜಿ ಎಚ್ ಎ ಉಮ್ಮರ್, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಸುದ್ದೀನ್ ಅರಂಬೂರು, ನಿರ್ದೇಶಕರುಗಳಾದ ಹಾಜಿ ಅಬ್ದುಲ್ ಸಮದ್, ಮುನೀರ್ ಸಿಲೋನ್, ಅಬ್ದುಲ್ ಖಾದರ್ ಶಾಂತಿನಗರ, ಹಾಗೂ ಮದರಸ ಆಧ್ಯಾಪಕರುಗಳು, ಜಮಾತ್ ಸದಸ್ಯರು, ಫಲಾನುಭವಿಗಳು ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಎಸ್ ವೈ, ಸ್ಥಳೀಯರಾದ ಹಸೈನಾರ್ ಜಯನಗರ, ಕಲಂದರ್ ಶಾಪಿ ನೊಂದಾವಣಿ ಕಾರ್ಯದಲ್ಲಿ ಸಹಕರಿಸಿದರು.
ನೂರಕ್ಕೂ ಹೆಚ್ಚು ಸ್ಥಳೀಯ ಮತದಾರರು ಅಭಿಯಾನದ ಪ್ರಯೋಜನವನ್ನು ಪಡೆದುಕೊಂಡರು.