ಮಂಗಳೂರು ವಕೀಲರ ಮೇಲೆ ಪೋಲೀಸ್ ದೌರ್ಜನ್ಯ : ಕ್ರಮಕ್ಕೆ ಆಗ್ರಹಿಸಿ ಸುಳ್ಯ ವಕೀಲರ ಸಂಘದಿಂದ ಗೃಹಸಚಿವರಿಗೆ ಮನವಿ

0

ಮಂಗಳೂರಿನ ಯುವ ವಕೀಲ ಕುಲದೀಪ್ ಶೆಟ್ಟಿ ಯವರ ಮೇಲೆ ಬಂಟ್ವಾಳ ಪುಂಜಾಳಕಟ್ಟೆಯ ಪೋಲೀಸ್ ಠಾಣಾ ಸಿಬ್ಬಂದಿಗಳು ನಡೆಸಿದ ದೌರ್ಜನ್ಯ ವನ್ನು ಸುಳ್ಯ ವಕೀಲರ ಸಂಘ ಖಂಡಿಸಿದ್ದು, ದೌರ್ಜನ್ಯ ಎಸಗಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸುಳ್ಯ ವಕೀಲರ ಸಂಘದ ವತಿಯಿಂದ ತಹಶೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.

ಸುಳ್ಯ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ.ಯವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದ್ದು, ಸಂಘದ ಪ್ರಧಾನ ಕಾರ್ಯದರ್ಶಿ ವಿನಯ ಮುಳುಗಾಡು, ಪದಾಧಿಕಾರಿಗಳಾದ ಜಗದೀಶ್ ಡಿ.ಪಿ., ಹರ್ಷಿತ್ ಕಾರ್ಜ, ಅಬೂಬಕರ್ ಅಡ್ಕಾರ್, ಸತೀಶ್ ಕುಂಭಕ್ಕೋಡು, ಹಿರಿಯ ವಕೀಲರಾದ ಭಾಸ್ಕರ್ ರಾವ್, ಸುಕುಮಾರ್ ಕೋಡ್ತುಗುಳಿ, ವಕೀಲರಾದ ಹರೀಶ್ ‌ಬೂಡುಪನ್ನೆ, ಪುರುಷೋತ್ತಮ ಮಲ್ಕಜೆ, ಚರಣ್ ಕಾಯರ, ಪ್ರತಿಭಾ ಪಾನತ್ತಿಲ, ಜಯಪ್ರಕಾಶ್ ಕಜೆತಡ್ಕ, ಚಂದ್ರಶೇಖರ ಉದ್ದಂತಡ್ಕ, ವಿಪುಲ್ ನೀರ್ಪಾಡಿ, ಸಾಗರ್ ಮೊದಲಾದವರಿದ್ದರು.