ಗ್ರಾಮ ಲೆಕ್ಕಿಗರು’ ಇನ್ನು ಮುಂದೆ ‘ಗ್ರಾಮ ಆಡಳಿತ ಅಧಿಕಾರಿ’ ಪದನಾಮ ಬದಲಾಯಿಸಿ ಸರಕಾರ ಆದೇಶ

0

ಕಂದಾಯ ಇಲಾಖೆಯಲ್ಲಿನ ಗ್ರಾಮ ಲೆಕ್ಕಿಗರು (ವಿ.ಎ.) ಇನ್ನು ಮುಂದೆ ‘ಗ್ರಾಮ ಆಡಳಿತ ಅಧಿಕಾರಿ’ ಎಂದು ಪದನಾಮ ಬದಲಾಯಿಸಿ ಸರಕಾರ ಆದೇಶ ಮಾಡಿದೆ.

ಡಿ.6 ರಂದು ಈ ಕುರಿತು ಆದೇಶ ಹೊರಡಿಸಿರುವ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಯವರು ಕಂದಾಯ ಇಲಾಖೆಯಲ್ಲಿನ ಗ್ರಾಮ ಲೆಕ್ಕಿಗರ ಹುದ್ದೆಯ ವೇತನ ಶ್ರೇಣಿ, ನೇಮಕಾತಿ ವಿಧಾನ ಅಥವಾ ಕರ್ತವ್ಯ ಮತ್ತು ಜವಾಬ್ದಾರಿ ಗಳಲ್ಲಿ ಯಾವುದೇ ಬದಲಾವಣೆ ಇಲ್ಲದೆ ಗ್ರಾಮ ಲೆಕ್ಕಿಗರು ಎಂಬ ಪದನಾಮ ವನ್ನು ಗ್ರಾಮ ಆಡಳಿತ ಅಧಿಕಾರಿ ಎಂದು ಬದಲಾಯಿಸಿ ಆದೇಶಿಸಿದೆ ಎಂದು ಉಲ್ಲೇಖದಲ್ಲಿ ತಿಳಿಸಿದ್ದಾರೆ.