ಪಂಜ:ವನಿತಾ ಸಮಾಜದ ವಾರ್ಷಿಕೋತ್ಸವ ಸಮಾರಂಭ

0

ವನಿತಾ ಸಮಾಜ (ರಿ) ಪಂಜ ಇದರ 2021-22 ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭವು ಬೆಳ್ಳಾರೆ ಕುರಿಯಾಜೆಯ ಶ್ರೀಯುತ ತಿರುಮಲೇಶ್ವರ ಭಟ್ ರವರ ಮನೆಯಲ್ಲಿ ಆಚರಿಸಲಾಯಿತು.. ಅವರು ಬೆಳೆದ ವಿವಿಧ ಬಗೆಯ ಹೂಗಿಡಗಳ, ಹಣ್ಣುಗಳ ಹಾಗು ತರಕಾರಿ ಬೆಳೆಗಳನ್ನು ವೀಕ್ಷಿಸಿ ಮಾಹಿತಿಯನ್ನು ಪಡೆದರು..ನಂತರ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು..ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಡಿ ಪ್ರಸಾದ್ ಸ್ವಾಗತಿಸಿದರು..

ಗೌರವಾಧ್ಯಕ್ಷೆ ಶ್ರೀಮತಿ ಹೇಮಲತಾ ಜನಾರ್ದನ್,ಪೂರ್ವಾಧ್ಯಕ್ಷರುಗಳು ಹಾಗು ಸದಸ್ಯರು ಭಾಗವಹಿಸಿದರು.. ಕಾರ್ಯದರ್ಶಿ ಶ್ರೀಮತಿ ಭಾಗೀರಥಿ ಕರಿಕ್ಕಳ ವಂದಿಸಿದರು.