ರೋಟರಿ ಆಂಗ್ಲಮಾದ್ಯಮ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾ ಕೂಟ

0
275

ಡಿಸೆಂಬರ್ 3 ರಂದು ರೋಟರಿ ಆಂಗ್ಲಮಾದ್ಯಮ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸುಳ್ಯದ ಅಧ್ಯಕ್ಷರಾಗಿರುವ ರೊ ಚಂದ್ರಶೇಖರ್ ಪೇರಾಲ್ ರವರು ವಹಿಸಿದ್ದರು. ವಿದ್ಯಾಸಂಸ್ಥೆಯ ಸಂಚಾಲಕರಾದ ರೊ.ಗಿರಿಜಾಶಂಕರ್ ತುದಿ ಯಡ್ಕರವರು ಧ್ವಜಾರೋಹಣ ಮಾಡಿ ಮಕ್ಕಳಿಗೆ ಶುಭ ಹಾರೈಸಿದರು.

p>

ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಾದ ದಿಶಾಲಕ್ಷ್ಮಿ , ಅನನ್ಯ. ಕೆ.ಬಿ. , ಹಾಗೂ ಆದಿತ್ಯ. ಪಿ.ವೈ, ಕೌಶಿಕ್. ರೈ.ಅದ್ವೈತ್,ಶಮಿತಾ, ತುಷಾರ್, ಹಫೀಝ್ ಯವರು ನಾಗಪಟ್ಟಣ ಸದಾಶಿವ ದೇವಾಲಯದಿಂದ ಕ್ರೀಡಾ ಜ್ಯೋತಿಯನ್ನು ತಂದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ವಿಶ್ರಾಂತ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಗಳಾದ ಶ್ರೀ. ಲಕ್ಷ್ಮೀಶ ರೈ ಯವರು ದೀಪ ಬೆಳಗಿಸಿ ಕ್ರೀಡಾ ಕೂಟವನ್ನು ಉದ್ಘಾಟಿಸಿ , ಕ್ರೀಡೆಯ ಮಹತ್ವವನ್ನು ವರ್ಣಿಸಿದರು.
ಆಡಳಿತ ಮಂಡಳಿಯ ಸದಸ್ಯರಾದ ರೊ.ದಯಾನಂದ ಆಳ್ವ, ರೊ.ಪ್ರಭಾಕರ್ ನಾಯರ್, ರೊ.ಬೆಳ್ಯಪ್ಪ .ಗೌಡ , ಶಿಕ್ಷಕ – ರಕ್ಷಕ ಸಂಘದ ಸದಸ್ಯರು ಚಂದ್ರಶೇಖರ್ ಕೇರ್ಪಳ,ಮೋಹನ್, ಹಾಗೂ ದೇವಿಕಾ ,ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಗೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಸಹಕರಿಸಿದರು.


ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ವಂದಿಸಿದರು. ಶಿಕ್ಷಕಿಯರಾದ ಶ್ರೀಮತಿ ಜಯಶ್ರೀ. ಕೆ. , ಕು.ರಮ್ಯಾ, ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ, ಹಾಗೂ ವಿದ್ಯಾರ್ಥಿನಿ ಪ್ರಣಮ್ಯ ಎನ್ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಶ್ರೀಮತಿ ಜಯಶ್ರೀ. ಕೆ. , ಕು.ರಮ್ಯಾ, ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ, ಹಾಗೂ ವಿದ್ಯಾರ್ಥಿನಿ ಪ್ರಣಮ್ಯ ಎನ್ ಆಳ್ವ. ಕಾರ್ಯಕ್ರಮ ನಿರೂಪಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಮಂಜುನಾಥ ಎ. ಯು. ಕ್ರೀಡಾಕೂಟವನ್ನು ಸಂಘಟಿಸಿದರು.

LEAVE A REPLY

Please enter your comment!
Please enter your name here