ಡಾ. ಆರ್. ಕೆ. ನಾಯರ್ ಅವರಿಗೆ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ

0

ಮುಂಬೈನ ಚೆಂಬೂರು ಕರ್ನಾಟಕ‌ ಸಂಘವು ನೀಡುವ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಅರಾಟೆ ನಾಗಮ್ಮ ಶೇಷಮ್ಮ ಪೂಜಾರಿ ಸ್ಮಾರಕ ಪ್ರಶಸ್ತಿಗೆ ಗ್ರೀನ್ ಹೀರೋ ಆಫ್ ಇಂಡಿಯ, ಗುಜರಾತ್ ನಲ್ಲಿ ಉದ್ಯಮಿಯಾಗಿರುವ ಸುಳ್ಯದ ಡಾ. ಆರ್ . ಕೆ. ನಾಯರ್ ಆಯ್ಕೆಯಾಗಿದ್ದಾರೆ.

ತುಳು ಕನ್ನಡ ಸಂಸ್ಕೃತಿ ವಕ್ತಾರರಾಗಿ ಪರಿಸರಕ್ಕೆ ಸಲ್ಲಿಸಿದ ಸೇವೆಗಾಗಿ ಅವರನ್ನು ಪ್ರಶಸ್ತಿಗೆ ಆರಿಸಲಾಗಿದ್ದು ಪ್ರಶಸ್ತಿ ಪ್ರದಾನ ಸಮಾರಂಭ ಡಿ.18 ರಂದು ಮುಂಬೈನಲ್ಲಿ ನಡೆಯಲಿದೆ.