ಕಾಚಿಲ: ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಸಾಮೂಹಿಕ ತಂಬಿಲ ಸೇವೆ ಮತ್ತು ಆಗೇಲು ಸಮ್ಮಾನ

0

ಕಲ್ಮಡ್ಕ ಗ್ರಾಮದ ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ 9ನೇ ವರ್ಷದ ಶ್ರೀ ಮಹಾವಿಷ್ಣುಮೂರ್ತಿ ದೈವಕ್ಕೆ ಸಾಮೂಹಿಕ ತಂಬಿಲ ಸೇವೆ ಹಾಗೂ ಶ್ರೀ ಮುಳ್ಳುಗುಳಿಗ ದೈವಕ್ಕೆಆಗೇಲು ಸಮ್ಮಾನ ಕಾರ್ಯಕ್ರಮ ದ.6 ರಂದು ಜರುಗಿತು.ದೈವಸ್ಥಾನದ ಮೊಕ್ತೇಸರ ರಾಮಚಂದ್ರ ಎಡಪತ್ಯ, ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷ ಲೋಕಯ್ಯ ನಾಯ್ಕ ಬೊಳಿಯುರು, ಶ್ರೀ ಮಹಾವಿಷ್ಣುಮೂರ್ತಿ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವೇದಾವತಿ ಮಾಳಪ್ಪಮಕ್ಕಿ, ವಿವಿಧ ಸಮಿತಿಯ‌ ಸದಸ್ಯರು, ಊರ ಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು. ಭಕ್ತರಿಂದ ಒಟ್ಟು 235 ತಂಬಿಲ ಮತ್ತು ಅಗೇಲು ಸಮ್ಮಾನ ಸೇವೆ ಜರುಗಿತು.