ಅರಂತೋಡು : ತೆಂಗಿನ ಮರ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು

0

ತೆಂಗಿನ ಮರ ಬಿದ್ದು ಗಾಯಗೊಂಡಿದ್ದ ಅರಂತೋಡಿನ ಮಹಿಳೆ ಮೃತಪಟ್ಟ ಘಟನೆ ಇದೀಗ ವರದಿಯಾಗಿದೆ.

ಅರಂತೋಡು ಉಳುವಾರು ಮೇದಪ್ಪ ಗೌಡರ ತೋಟದಲ್ಲಿ ಕೊಡೆಂಕಿರಿಯ ಬಾಲಣ್ಣರವರ ಪತ್ನಿ ಶ್ರೀಮತಿ ಕಮಲರವರು ಅಡಿಕೆ ಹೆಕ್ಕುತ್ತಿದ್ದಾಗ ಒಣಗಿದ ತೆಂಗಿನ ಮರವೊಂದು ಕಮಲರವರ ಮೇಲೆ ಬಿದ್ದು ಗಂಭೀರ ಗಾಯಗಳಾಗಿತ್ತು. ಕೂಡಲೇ ಸ್ಥಳಕ್ಕೆ ಬಂದ ಮೇದಪ್ಪರವರು ಕಮಲರವರನ್ನು ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಂಬ್ಯುಲೆನ್ಸ್‌ನಲ್ಲಿ ಸುಳ್ಯ ಕೆ.ವಿ.ಜಿ. ಆಸ್ಪತ್ರೆಗೆ ಕರೆತಂದಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ವಾಪಾಸ್ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರೆಂದು ತಿಳಿದು ಬಂದಿದೆ. ಅವರಿಗೆ 62 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಚಿದಾನಂದ, ಪುತ್ರಿ ತಾರಾಮಣಿ ಹಾಗೂ ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ.