ಬಾಳಿಲ ಗ್ರಾಮ ಪಂಚಾಯತ್ ನಲ್ಲಿ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ

0

ಬಾಳಿಲ ಗ್ರಾಮ ಪಂಚಾಯತ್‌ ನಲ್ಲಿ ಮಹಿಳಾ ಸಬಲೀಕರಣ ಅಭಿಯಾನ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಮಕ್ಕಳ ಸ್ನೇಹಿ ವಿಶೇಷ ಗ್ರಾಮ ಸಭೆಯು ಡಿ.07 ರಂದು ನಡೆಯಿತು.
ಮಹಿಳಾ ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಸವಿತಾ ಕೆ ವಹಿಸಿದ್ದರು. ಮಕ್ಕಳ ಸ್ನೇಹಿ ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಬಾಳಿಲ ವಿದ್ಯಾಬೋಧಿನಿ ಪ್ರೌಢ ಶಾಲೆಯ ವಿದ್ಯಾರ್ಥಿಯಾದ ಜನಕ ಕೆ ಇವರು ವಹಿಸಿದ್ದರು. ಸಭೆಯ ನೋಡೆಲ್‌ ಅಧಿಕಾರಿಯಾಗಿ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿಯಾದ ಶ್ರೀಮತಿ ರವಿಶ್ರೀ ಕೆ ಇವರು ವಹಿಸಿದ್ದರು. ಇವರೊಂದಿಗೆ ಆರೋಗ್ಯ ಅಮೃತ ಅಭಿಯಾನ ಯೋಜನೆ ಕಾರ್ಯಕ್ರಮಗಳ ಮಾಹಿತಿಯನ್ನು ತಾಲೂಕು ಸಂಯೋಜಕರಾದ ಶ್ರೀಮತಿ ಗೀತಾ ನೀಡಿದರು. ನರೇಗಾ ಯೋಜನೆ ಮಾಹಿತಿಯನ್ನು ತಾಲೂಕು IEC ಸಂಯೋಜಕರಾದ ನಮಿತಾ ನೀಡಿದರು. ಬೀಟ್‌ ಪೋಲೀಸ್‌ ಶ್ರೀ ಮೋಹನ್‌ ಇವರು ಮಕ್ಕಳ ರಕ್ಷಣೆ ಹಾಗೂ ಮಹಿಳಾ ದೌರ್ಜನ್ಯ ವಿಚಾರವಾಗಿ ಮಾಹಿತಿ ನೀಡಿದರು. ವಿಶೇಷ ಗ್ರಾಮ ಸಭೆಯಲ್ಲಿ ಗ್ರಾ.ಪಂ ವ್ಯಾಪ್ತಿಯ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಆರೋಗ್ಯ ಅಧಿಕಾರಿಗಳು, ಅಂಗನವಾಡಿ – ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿನ ಸದಸ್ಯರು, ತಾ.ಪಂ ಮಾಜಿ ಸದಸ್ಯರಾದ ಶ್ರೀಮತಿ ಜಾಹ್ನವಿ ಕಾಂಚೋಡು ಮತ್ತು ಗ್ರಾಮದ ಮಹಿಳೆಯರು ಹಾಗೂ ಗ್ರಾಮ ಪಂಚಾಯತ್‌ ನ ಸಿಬ್ಬಂದಿಗಳು ಹಾಜರಿದ್ದರು. ಗ್ರಾಮ ಪಂಚಾಯತ್‌ ಪಂ.ಅ.ಅಧಿಕಾರಿ ಹೂವಪ್ಪ ಗೌಡರವರು ಸ್ವಾಗತಿಸಿ,ವಂದಿಸಿದರು.