ಲೇಖಕಿ ಶ್ರೀಮತಿ ಲೀಲಾ ದಾಮೋದರ ಬರೆದಿರುವ ಅರೆಭಾಷೆ ಕಾದಂಬರಿ ‘ಕುರು ಸಾಮ್ರಾಜ್ಞಿ’ ಕೃತಿ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ

0

ಖ್ಯಾತ ಲೇಖಕಿ ಶ್ರೀಮತಿ ಲೀಲಾ ದಾಮೋದರ ಅವರು ಬರೆದಿರುವ ಅರೆಭಾಷೆ ಕಾದಂಬರಿ ‘ಕುರು ಸಾಮ್ರಾಜ್ಞಿ’ ಕೃತಿ ಡಿಸೆಂಬರ್ ಹತ್ತರಂದು ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಲಿದೆ.
ಇದು ಸಾಹಿತಿ ಡಾ. ಪ್ರಭಾಕರ ಶಿಶಿಲ ಅವರ ‘ಮತ್ಸ್ಯಗಂಧಿ’ಯ ಅನುವಾದಿತ ಕೃತಿ.

ಕುರು ಸಾಮ್ರಾಜ್ಞಿಯು ಲೇಖಕಿಯವರ ಏಳನೇ ಕೃತಿಯಾಗಿದೆ.

ಅರೆಭಾಷೆಯಲ್ಲಿ ಇದು ಅವರ ಎರಡನೇ ಕೃತಿ. ಈ ಪುಸ್ತಕವು ಧಾತ್ರಿ ಪ್ರಕಾಶನದಿಂದ ಪ್ರಕಟಗೊಳ್ಳುತ್ತಿದೆ. ಇತ್ತೀಚೆಗಷ್ಟೆ ಬಿಡುಗಡೆಯಾಗಿರುವ ‘ಗುಬ್ಬಿ ಗೂಡುನ ಚಿಲಿಪಿಲಿ’ ಇವರ ಮೊದಲ ಅರೆಭಾಷಾ ಕೃತಿ ಆಗಿರುತ್ತದೆ. ಮಂಗಳೂರು ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕಿ ಆಗಿರುವ ಲೀಲಾದಾಮೋದರ್ ಪ್ರಸ್ತುತ ಸುಳ್ಯದಲ್ಲಿ ನೆಲೆಸಿದ್ದಾರೆ.

ಹೆಗ್ಗಡೆಯ ಮಗಳು (ಕಥಾ ಸಂಕಲನ), ಕಂದನ ಕನಸು, ಮಾತು ಬೇಡದ ಕ್ಷಣಗಳು (ಕವನ ಸಂಕಲನಗಳು), ಅದೇ ಭೂಮಿ ಅದೇ ಬಾನು (ಅಮೇರಿಕ ಪ್ರವಾಸ ಕಥನ), ಗೆಲುವಾಗೆಲೆ ಮನ (ಲಲಿತ ಪ್ರಬಂಧಗಳು) ಅವರ ಇತರ ಪ್ರಕಟಿತ ಕೃತಿಗಳು.
ತುಷಾರ ಎಚ್.ಎಂ.ಟಿ. ಪ್ರಶಸ್ತಿ, ಕಲ್ಕೂರ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವ ಪ್ರಶಸ್ತಿ, ಕಲ್ಕೂರ ಸಾಹಿತ್ಯ ಸಿರಿ ಪ್ರಶಸ್ತಿಗಳು ಇವರಿಗೆ ಒಲಿದು ಬಂದಿವೆ.