ಗೋಪಾಲಕಜೆ: ಮರ ಸಾಗಾಟದಿಂದ ರಸ್ತೆಯಲ್ಲಿ ಬಿರುಕು

0

ಕಳಂಜ ಗ್ರಾಮದ ಗೋಪಾಲಕಜೆ ಎಂಬಲ್ಲಿ ಅವ್ಯಾಹತವಾಗಿ ಲಾರಿಯಲ್ಲಿ ಮರಸಾಗಾಟ ಮಾಡಿದ ಪರಿಣಾಮ ರಸ್ತೆಯೊಂದು ಬಿರುಕು ಬಿಟ್ಟ ಘಟನೆ ವರದಿಯಾಗಿದೆ. ಕಳೆದೊಂದು ವಾರದಿಂದ ಈ ಭಾಗದಲ್ಲಿ ಅಕೇಶಿಯಾ ಮತ್ತಿತರ ಮರಗಳನ್ನು ಕಡಿದು ಸಾಗಾಟ ಮಾಡುತ್ತಿದ್ದು ಡಿ.8 ರಾತ್ರಿಯೂ ಮರ ಸಾಗಾಟ ಮಾಡಿದ್ದು ಗೋಪಾಲ ಕಜೆ ಎಂಬಲ್ಲಿ ರಸ್ತೆಯ ಒಂದು ಬದಿ ಆಳವಾದ ಬರೆಯಿದ್ದು ಅದೇ ಭಾಗದಲ್ಲಿ ರಸ್ತೆ ಬಿರುಕು ಬಿಟ್ಟಿರುವುದಾಗಿ ತಿಳಿದು ಬಂದಿದೆ.

ಮುಂದಿನ ಮಳೆಗಾಲ ಈ ರಸ್ತೆಯ ಭಿರುಕಿನಲ್ಲಿ ನೀರು ಹೋಗಿ ರಸ್ತೆ ಅಪಾಯಕೊಳ್ಳಗಾಗುವುದು ಗ್ಯಾರಂಟಿಯಾಗಿದೆ. ಕಚ್ಚಾ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಮರ ಸಾಗಾಟ ಮಾಡುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಯಾದರೂ, ಈ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ಬಂದಿದೋ ಇಲ್ವೋ ಗೊತ್ತಿಲ ಆದರೆ ರಸ್ತೆಗೆ ಅಪಾಯವಂತೂ ಖಚಿತವಾಗಿದೆ.