ತಾಲೂಕು ಮಟ್ಟದ ಕೇರಳೋತ್ಸವ ಕಬಡ್ಡಿಯಲ್ಲಿ ಕಲ್ಲಪಳ್ಳಿಗೆ ಅವಳಿ ಪ್ರಶಸ್ತಿ

0

ಮಹಿಳಾ ವಿಭಾಗದಲ್ಲಿ ಆದರ್ಶ ತಂಡ ಪ್ರಥಮ, ಪುರುಷರ ವಿಭಾಗದಲ್ಲಿ ಪ್ರೀತಿ ತಂಡ ದ್ವಿತೀಯ- ಜಿಲ್ಲಾ ಮಟ್ಟಕ್ಕೆ ಆಯ್ಕೆ

ತಾಲೂಕು ಮಟ್ಟದ ಕೇರಳೋತ್ಸವ ಕಬಡ್ಡಿ ಪಂದ್ಯಾಟದಲ್ಲಿ ಗಡಿ ಪ್ರದೇಶವಾದ ಕಲ್ಲಪಳ್ಳಿಗೆ ಅವಳಿ ಪ್ರಶಸ್ತಿ ಲಭಿಸಿದೆ.
ಇಂದು ನಡೆದ ಕೇರಳೋತ್ಸವ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಮಹಿಳಾ ವಿಭಾಗದಲ್ಲಿ ಪನತ್ತಡಿ ಪಂಚಾಯತನ್ನು ಪ್ರತಿನಿಧಿಸಿದ ಕಲ್ಲಪಳ್ಳಿಯ ಆದರ್ಶ ಕಲಾ ಮತ್ತು ಸಾಂಸ್ಕೃತಿಕ ಸಂಘದ ಮಹಿಳಾ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಮಹಿಳಾ ತಂಡ

ಪುರುಷರ ವಿಭಾಗದಲ್ಲಿ ಪನತ್ತಡಿ ಪಂಚಾಯತನ್ನು ಪ್ರತಿನಿಧಿಸಿದ ಕಲ್ಲಪಳ್ಳಿಯ ಪ್ರೀತಿ ಕಲಾ ಮತ್ತು ಕ್ರೀಡಾ ಸಂಘದ ಪುರುಷರ ತಂಡ ದ್ವಿತೀಯ ಸ್ಥಾನ ಪಡೆದು ಕೊಂಡಿದೆ. ಪಂಚಾಯತ್ ಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ಕಲ್ಲಪಳ್ಳಿಯ ಪುರುಷ -ಮಹಿಳಾ ತಂಡಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿತ್ತು. ಇನ್ನೂ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಲಿದ್ದಾರೆ.

ಪುರುಷ ತಂಡ