ದುಗ್ಗಲಡ್ಕ – ಕೊಯಿಕುಳಿ ರಸ್ತೆ ಡಾಮರೀಕರಣಕ್ಕೆ ಸಚಿವರಿಂದ ಶಿಲಾನ್ಯಾಸ

0


ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ದುಗ್ಗಲಡ್ಕ – ಕೊಯಿಕುಳಿ ರಸ್ತೆಯು ಶಾಸಕರ ಅನುದಾನದ ನಗರೋತ್ಥಾನ ಯೋಜನೆಯ 20ಲಕ್ಷ ಅನುದಾನದಲ್ಲಿ ಡಾಮರೀಕರಣಗೊಳ್ಳಲಿದ್ದು, ಇಂದು ಸಚಿವರಾದ ಎಸ್.ಅಂಗಾರ ದುಗ್ಗಲಡ್ಕದಲ್ಲಿ ಶಿಲಾನ್ಯಾಸ ನೆರವೇರಿಸಿದರು.
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಚಿವರು ಈ ಕಾಮಗಾರಿಗೆ 20 ಲಕ್ಷ ಅನುದಾನ ಮಂಜೂರಾಗಿದ್ದು, ಹೆಚ್ಚಿನ ಅನುದಾನ ಒದಗಿಸಿ ದುಗ್ಗಲಡ್ಕದಿಂದ ಕೊಯಿಕುಳಿ ವರೆಗೆ ಸಂಪೂರ್ಣ ಡಾಮರೀಕರಣ ಮಾಡಲಾಗುವುದು ಎಂದು ಹೇಳಿದರು.


ನ‌.ಪಂ.ಅಧ್ಯಕ್ಷ ವಿನಯಕುಮಾರ ಕಂದಡ್ಕ, ಸದಸ್ಯರುಗಳಾದ ಶ್ರೀಮತಿ ಶಶಿಕಲಾ ನೀರಬಿದಿರೆ, ಬಾಲಕೃಷ್ಣ ರೈ ದುಗ್ಗಲಡ್ಕ, ಮುಖ್ಯಾಧಿಕಾರಿ ಸುಧಾಕರ್, ಮಾಜಿ ಆಧ್ಯಕ್ಷೆ ಶೀಲಾವತಿ ಮಾಧವ, ಪ್ರಮುಖರಾದ ಹೇಮಂತ ಕುಮಾರ್ ಕಂದಡ್ಕ, ದಿನೇಶ್ ಡಿ.ಕೆ.,ಸುಂದರ ರಾವ್, ಚಂದ್ರಶೇಖರ ಗೌಡ ಮೋಂಟಡ್ಕ, ಧನಂಜಯ(ಮನು) ದುಗ್ಗಲಡ್ಕ, ಅರುಣ್ ಇಂಜಿನಿಯರ್, ಶ್ಯಾಮ್ ಭಟ್, ಕಂಟ್ರಾಕ್ಟರ್ ಹಂಝ, ದುಗ್ಗಲಡ್ಕ ಪ್ರೌಢ ಮುಖ್ಯ ಶಿಕ್ಷಕ ಸುರೇಶ್ ಕುಮಾರ್, ಕೊಯಿಕುಳಿ ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕ ಮಾಧವ ಎಂ.ಉಪಸ್ಥಿತರಿದ್ದರು.