ಶ್ರೀಮತಿ ಪುಷ್ಪಾವತಿ ಅರಂಬೂರು ರವರಿಗೆ ಸಾರ್ವಜನಿಕ ಶ್ರದ್ಧಾಂಜಲಿ

0

ಆಲೆಟ್ಟಿ ಗ್ರಾಮದ ಅರಂಬೂರು ಮನೆತನದ ದಿ.ಶಾಂತಪ್ಪ ಗೌಡ ರವರ ಪತ್ನಿ ಶ್ರೀಮತಿ ಪುಷ್ಪಾವತಿ ಅರಂಬೂರು ರವರು ನ.28 ರಂದು ನಿಧನರಾಗಿದ್ದು ಅವರ ಉತ್ತರ ಕ್ರಿಯಾಧಿ ಸದ್ಗತಿ ಕಾರ್ಯಕ್ರಮ ಹಾಗೂ ಸಾರ್ವಜನಿಕ ನುಡಿನಮನವು ಕುದ್ಕುಳಿ ಮನೆಯಲ್ಲಿ ಡಿ.9 ರಂದು ನಡೆಯಿತು.


ಈ ಸಂದರ್ಭದಲ್ಲಿ ಅರಂಬೂರು ಮನೆತನದ ಎ.ಕೆ.ಮೋಹನ ರವರು ಮೃತರ ಜೀವನಗಾಥೆಯ ಕುರಿತು ನುಡಿನಮನ ಸಲ್ಲಿಸಿದರು. ಪುತ್ರರಾದ ಉದಯ್ ಅರಂಬೂರು, ಉಲ್ಲಾಸ್ ಅರಂಬೂರು, ಪುತ್ರಿಯರಾದ ಶ್ರೀಮತಿ ಶೋಭಾ, ಶ್ರೀಮತಿ ರೇಖಾ, ಸೊಸೆಯಂದಿರಾದ ಶ್ರೀಮತಿ ಪವಿತ್ರ, ಶ್ರೀಮತಿ ಸಯನಾ, ಅಳಿಯಂದಿರಾದ ಯೋಗೀಶರಾಮ ಗುಂಡ್ಯ, ಚಂದ್ರಶೇಖರ ಕಾಳಂಮನೆ, ಸಹೋದರಿಯರು, ಮೊಮ್ಮಕ್ಕಳು ಹಾಗೂ ಕುಟುಂಬದ ಹಿರಿಯ, ಕಿರಿಯ ಸದಸ್ಯರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಕೋರಿದರು.