ಕೇರ್ಪಡ ಜಾತ್ರೋತ್ಸವ : ಗೊನೆ ಮುಹೂರ್ತ

0

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿಸೆಂಬರ್ 15 ಮತ್ತು 16 ರಂದು ಜಾತ್ರೋತ್ಸವ ನಡೆಯಲಿರುವುದು. ಆ ಪ್ರಯುಕ್ತ ಇಂದು ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಬಳಿಕ ಕೇರ್ಪಡ ಸುಂದರ ಗೌಡರ ಮನೆಯ ತೋಟದಲ್ಲಿ ವೈದಿಕ ಕಾರ್ಯಕ್ರಮಗಳೊಂದಿಗೆ ದೇವಸ್ಥಾನದ ಪ್ರಧಾನ ಅಚ್ಚಕ ಶ್ರೀಹರಿ ಕುಂಜೂರಾಯರವರು ಕೊನೆ ಕಡಿದರು.


ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಮತ್ತು ಸಮಿತಿ ಸದಸ್ಯರು ಶ್ರೀ ಮಹಿಷಮರ್ದಿನಿ ಸೇವಾ ಸಮಿತಿ, ಮಹಿಳಾ ಸೇವಾ ಸಮಿತಿ, ಮಹಿಷಮರ್ದಿನಿ ಕಲಾಸಂಘ, ಮಹಿಷಮರ್ದಿನಿ ಭಜನಾ ಸಮಿತಿ ಮತ್ತು ಕೂಡುಕಟ್ಟಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.