ಮಗಳ ಮನೆಗೆ ಬಂದ ತಾಯಿ ನಾಪತ್ತೆ, ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ ಮಗಳು

0
3303

ಮಗಳ ಮನೆಗೆಂದು ಬಂದ ಮಹಿಳೆಯೋರ್ವರು ಮರಳಿ ತಮ್ಮ ಮನೆಗೆ ಬಾರದೆ ಕಳೆದ 12 ದಿನಗಳಿಂದ ಕಾಣೆಯಾಗಿದ್ದು, ಇದೀಗ ಮಹಿಳೆಯ ಮಗಳು ಸುಳ್ಯ ಪೊಲೀಸ್ ಠಾಣೆಯಲ್ಲಿ ತಾಯಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

p>


ಮೂಲತ ಪುತ್ತೂರು ತಾಲೂಕಿನ ಬೆಳಂದೂರು ನಿವಾಸಿ ಪಳ್ಳಿಕುಂಞಿ ಎಂಬುವವರ ಪತ್ನಿ ಝುಬೈದಾ (50 ವರ್ಷ) ಸೆಪ್ಟೆಂಬರ್ 19ರಂದು ಸುಳ್ಯ ಹಳೆಗೇಟು ತಮ್ಮ ಮಗಳ ಮನೆಗೆಂದು ಬಂದು 25ನೇ ತಾರೀಕಿನಂದು ಊರಿಗೆ ಹೋಗುವುದಾಗಿ ಮಗಳ ಬಳಿ ತಿಳಿಸಿ ಹೋದವರು ಬೆಳಂದೂರು ಅವರ ಮನೆಗೆ ಹೋಗದೆ ಕಾಣೆಯಾಗಿದ್ದಾರೆ.


ಮನೆಯವರು ಮತ್ತು ಕುಟುಂಬಸ್ಥರು ಸಂಬಂಧಿಕರ ಕಡೆಗಳಲ್ಲಿ ವಿಚಾರಿಸಿದಾಗ ಇದುವರೆಗೆ ಯಾವುದೇ ಮಾಹಿತಿ ಸಿಗಲಿಲ್ಲವೆಂದು ತಿಳಿದು ಬಂದಿದೆ. ಅವರ ಬಳಿ ಇದ್ದ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದು ಮಗಳು ಸುಮಯ್ಯ ತಾಯಿ ಕಾಣೆಯಾಗಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರು ಸ್ವೀಕರಿಸುವ ಸುಳ್ಯ ಪೊಲೀಸರು ತನಿಖೆ ಕಾರ್ಯ ಆರಂಭಿಸಿದ್ದಾರೆ.ಈ ಮಹಿಳೆಯ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ತಿಳಿಸುವಂತೆ ಸಾರ್ವಜನಿಕರಿಗೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here