ಕಳಂಜ ಬಾಳಿಲ ಸಹಕಾರಿ ಸಂಘದಲ್ಲಿ ರೈತರಿಗೆ ಮಾಹಿತಿ

0

ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬಾಳಿಲ ಶಾಖೆಯಲ್ಲಿ ಹವಮಾನ ಬದಲಾವಣೆ ಮತ್ತು ಅಡಿಕೆ ಬೆಳೆಯಲ್ಲಿಯ ಎಲೆಚುಕ್ಕಿ ರೋಗ, ಹಳದಿರೋಗ ನಿವಾರಣೆ ಕುರಿತ ವಿಚಾರ ಸಂಕೀರ್ಣ ಮತ್ತು ಸಂವಾದ ಕಾರ್ಯಕ್ರಮ ಡಿ. 9ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎಂ. ಕೂಸಪ್ಪ ಗೌಡ ಮುಗುಪ್ಪು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಓರಿಯಂಟಲ್ ಕಿಸಾನ್ ಸೌಹಾರ್ದ ಕೋ. ಲಿ. ಚಿಕ್ಕಬಳ್ಳಾಪುರ ಇದರ ಅಧ್ಯಕ್ಷ ಅಮರ್ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಓರಿಯಂಟಲ್ ಕಿಸಾನ್ ಸೌಹಾರ್ದ ಕೋ.ಲಿ ಚಿಕ್ಕಬಳ್ಳಾಪುರ ಇದರ ಮುಖ್ಯ ತಾಂತ್ರಿಕ ಅಧಿಕಾರಿ ಚಂದ್ರಶೇಖರ ಬಿ ವಿ ಭಾಗವಹಿಸಿ ರೈತರಿಗೆ ಅಡಿಕೆ ಬೆಳೆಯಲ್ಲಿನ ಸಮಸ್ಯೆಗಳಿಗೆ ಪರಿಹಾರ, ಅಡಿಕೆ ಕೃಷಿಯಲ್ಲಿ ಪೋಷಕಾಂಶಗಳ ನಿರ್ವಹಣೆ ಮತ್ತು ಕೀಟಗಳ ಹತೋಟಿ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಕರುಣಾಕರ ಶೆಟ್ಟಿ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ನಾಯಕ್ ಉಪಸ್ಥಿತರಿದ್ದರು.