ಕುಕ್ಕುಜಡ್ಕದಲ್ಲಿ ಶ್ರೀ ಮೂಕಾಂಬಿಕಾ ಫೂಟ್ ವೇರ್ & ಫ್ಯಾನ್ಸಿ ಗಿಫ್ಟ್ ಸೆಂಟರ್ ಶುಭಾರಂಭ

0

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದಲ್ಲಿ ರುವ ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮರ ಸಹಕಾರ ಸೌಧ ವಾಣಿಜ್ಯ ಸಂಕೀರ್ಣದಲ್ಲಿ ಮಂಜುನಾಥ ಕೆ. ಮತ್ತು ಶ್ರೀಮತಿ ಅನಿತಾ ಮಂಜುನಾಥ
ರವರ ಮಾಲಕತ್ವದ
ಶ್ರೀ ಮೂಕಾಂಬಿಕಾ ಟ್ರೇಡರ್ಸ್ ಫೂಟ್ ವೇರ್ ಮತ್ತು ಫ್ಯಾನ್ಸಿ ಗಿಫ್ಟ್ ಸೆಂಟರ್ ಡಿ .8 ರಂದು ಶುಭಾರಂಭಗೊಂಡಿತು. ಪುತ್ತೂರಿನ ನಿರಾಲ ಬಾರ್ ಮತ್ತು ರೆಸ್ಟೋರೆಂಟ್ ಮಾಲಕಿ ಶ್ರೀಮತಿ ನವೀನ ರೈ ಪುತ್ತೂರು ಮಳಿಗೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಿರೀಕ್ಷಿತ್ ರೈ ಪುತ್ತೂರು, ‌ಶ್ರೀಮತಿ ಅಶ್ವಿನಿ ನಿರೀಕ್ಷಿತ್ ರೈ ಪುತ್ತೂರು , ಕುಕ್ಕುಜಡ್ಕ ಸೊಸೈಟಿ ಮಾಜಿ ಆದ್ಯಕ್ಷ ರಾಘವೇಂದ್ರ ಪುಳಿಮಾರಡ್ಕ,ಅಮರಮುಡ್ನೂರು ಪಂ.ಸದಸ್ಯೆ ಶ್ರೀಮತಿ ದಿವ್ಯ ಮಡಪ್ಪಾಡಿ, ಯುವ ಸಂಘಟಕ
ಶರಣ್ ಕರ್ಮಾಜೆ, ಸೊಸೈಟಿ ಸಿ.ಇ.ಒ ಮೋಹನ್ ಕುಮಾರ್ ಪೊಯ್ಯೆಮಜಲು, ಹಿರಿಯರಾದ ಶ್ರೀಮತಿ ಸರೋಜಿನಿ,‌ ಮಾಲಕರ ಸಹೋದರ ಗೋಪಾಲಕೃಷ್ಣ ಕುಕ್ಕುಜಡ್ಕ, ಗಗನ್, ಗರೀಷ್ಮ ಉಪಸ್ಥಿತರಿದ್ದು ಶುಭ ಹಾರೈಸಿದರು.


ಕು. ಮೋನಿಶಾ ಮತ್ತು ‌ಅನುಷ್ ಕುಕ್ಕುಜಡ್ಕ ಎಲ್ಲರನ್ನೂ ಸ್ವಾಗತಿಸಿದರು.
ಇವರ ಸಹಸಂಸ್ಥೆ ಶ್ರೀ ಮೂಕಾಂಬಿಕಾ ಫಾಸ್ಟ್ ಫುಡ್ ಸೆಂಟರ್ ಕುಕ್ಕುಜಡ್ಕದಲ್ಲಿ ಕೆಲ ವರುಷಗಳಿಂದ ವ್ಯವಹರಿಸುತ್ತಿದ್ದು ಜನರ ವಿಶ್ವಾಸ ಗಳಿಸಿಕೊಂಡ ಸಂಸ್ಥೆಯಾಗಿದೆ. ಇದೀಗ ಶುಭಾರಂಭಗೊಂಡ
ನೂತನ ಮಳಿಗೆಯಲ್ಲಿ ಫ್ಯಾನ್ಸಿ ಐಟಂ ಮತ್ತು ಗಿಫ್ಟ್ ಐಟಂಗಳು ಹಾಗೂ ಹೊಸ ವಿನ್ಯಾಸದ ಪ್ರಸಿದ್ಧ ಕಂಪೆನಿಯ ಆಕರ್ಷಕ ಪಾದರಕ್ಷೆಗಳ ಸಂಗ್ರಹವಿರುವುದಾಗಿ ಮಾಲಕರು ತಿಳಿಸಿದರು.