ಕುಕ್ಕುಜಡ್ಕ ವಿಷ್ಣು ನಗರದ ವಿಷ್ಣುಮೂರ್ತಿ ರಕ್ತೇಶ್ವರೀ ಪರಿವಾರ ದೈವಸ್ಥಾನದ ವಾರ್ಷಿಕ ಮಹೋತ್ಸವ ಹಾಗೂ ದೈವದ ಒತ್ತೆಕೋಲದ ಪೂರ್ವ ಭಾವಿ ಸಭೆ -ಆಮಂತ್ರಣ ಬಿಡುಗಡೆ

0
321

p>

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದ ವಿಷ್ಣುನಗರದ ಶ್ರೀ ವಿಷ್ಣುಮೂರ್ತಿ ಶ್ರೀ ರಕ್ತೇಶ್ವರೀ ಹಾಗೂ ಪರಿವಾರ ದೈವಗಳ ದೈವಸ್ಥಾನದ 69 ನೇ ವಾರ್ಷಿಕ ಮಹೋತ್ಸವ ಹಾಗೂ ಶ್ರೀ ದೈವಗಳ ನರ್ತನ ಸೇವೆ ಮತ್ತು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು
ಜ. 2 ರಿಂದ 4 ರ ತನಕ ನಡೆಯಲಿದ್ದು ಇದರ ಪೂರ್ವ ಸಿದ್ಧತೆಯ ಸಭೆ ಹಾಗೂ ಆಮಂತ್ರಣ ಪತ್ರ ಬಿಡುಗಡೆಯು ದೈವಸ್ಥಾನದ ವಠಾರದಲ್ಲಿ ಡಿ.9 ರಂದು ನಡೆಯಿತು.


ದೈವಸ್ಥಾನದ ಆಡಳಿತ ಮಂಡಳಿಯ ಹರ್ಷ ಕುಮಾರ್ ಎಂ.ಎಸ್, ಶ್ರೀಶ ಕುಮಾರ್ ಎಂ.ಎಸ್, ಪ್ರಕಾಶ್ ಎಂ.ಎಸ್,
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಘವೇಂದ್ರ ಪುಳಿಮಾರಡ್ಕ ಉಪಸ್ಥಿತರಿದ್ದರು.
ಉತ್ಸವದ ಪ್ರಯುಕ್ತ ವಿವಿಧ ಉಪಸಮಿತಿಯ ಸಂಚಾಲಕರಿಗೆ ಜವಬ್ದಾರಿ ವಹಿಸಿಕೊಡಲಾಯಿತು. ಆಮಂತ್ರಣ ಪತ್ರ ಹಂಚುವ ಕಾರ್ಯಕ್ಕೆ ವಾರ್ಡುವಾರು ತಂಡಗಳನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ಗೀತಾ, ಶ್ರೀಮತಿ ಮಲ್ಲಿಕಾ,
ಕೃಷ್ಣ ಪ್ರಸಾದ್ ಪೈಲೂರು, ಸತ್ಯಪ್ರಸಾದ್ ಪುಳಿಮಾರಡ್ಕ, ಜಯರಾಮ ಪುಳಿಮಾರಡ್ಕ, ನಾರಾಯಣ ಮೂಕಮಲೆ,ಕುಮಾರ ಬೆಳ್ಚಪ್ಪಾಡ, ಪರಮೇಶ್ವರ ಚೊಕ್ಕಾಡಿ, ಕೇಶವ ಪರಿವಾರ,
ಮೋನಪ್ಪ ಗೌಡ ಪಿಲಿಕಜೆ,‌ಮಿಥುನ್ ನಾಯರ್ ಕಲ್ಲು, ರಾಧಾಕೃಷ್ಣ ಕುಕ್ಕುಜಡ್ಕ,ಗೋಪಾಲ, ರುಕ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here