ಗೂನಡ್ಕ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ, ಬುದ್ಧಿ, ಭಾವಗಳ ದೀಪ್ತ ನಿರ್ವಹಣೆ ಕವಿತೆ: ಲೀಲಾ ದಾಮೋದರ್

0

ಬುದ್ಧಿ, ಭಾವಗಳ ವಿದ್ಯುದಾಲಿಂಗನದಿಂದ ಕವಿತೆ ಹುಟ್ಟುತ್ತದೆ. ಶ್ರೋತೃಗಳನ್ನು ಮುಟ್ಟುತ್ತದೆ ಎಂದು ಸಾಹಿತಿ ಶ್ರೀಮತಿ ಲೀಲಾ ದಾಮೋದರ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ ಮತ್ತು ಸಮ್ಮೇಳನ ಸ್ವಾಗತ ಸಮಿತಿ ನೇತೃತ್ವದಲ್ಲಿ ಗೂನಡ್ಕದಲ್ಲಿ ನಡೆದ ಸುಳ್ಯ ತಾಲೂಕು ೨೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಸಾಸ್ವಾದನೆಯ ಸುಂದರ ಅನುಭೂತಿ ಸಾಹಿತ್ಯ. ಕವಿತೆ ಸಾಹಿತ್ಯದ ಅತಿ ವಿಶಿಷ್ಟ ಪ್ರಾಕಾರ. ಕವಿತೆ ಜಗದ ಹೊಳಪು. ಅಂತರಂಗದ ಮೌನ ಎಂದವರು ಹೇಳಿದರು.

ಕವಿಗಳಾದ ಚಂದ್ರವತಿ ಬಡ್ಡಡ್ಕ, ತಾರಾನಾಥ ಅಡಿಗೈ, ದಮಯಂತಿ ಪೆರಾಜೆ, ಆಶಾ ಬಿ.ಆರ್., ಕುಸುಮಾಕರ ಅಂಬೆಕಲ್ಲು, ಅಪೂರ್ವ ಕೆ.ಟಿ .,ವಿನೋದ್ ಮೂಡಗದ್ದೆ, ವಿದ್ಯಾಶಂಕರಿ ಎಸ್. ಭಾಗವಹಿಸಿದ್ದರು.

ಜಯಾನಂದ ಸಂಪಾಜೆ ಸ್ವಾಗತಿಸಿ, ಕೇಶವ ಬಂಗ್ಲೆಗುಡ್ಡೆ ವಂದಿಸಿದರು. ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಟಡ್ಕ ಕಾರ್ಯಕ್ರಮ ನಿರೂಪಿಸಿದರು.