ನಾಡು – ನುಡಿ ವರ್ತಮಾನದ ಸವಾಲುಗಳು : ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಸಮಾಜದ ಇಂದಿನ ಸವಾಲುಗಳಿಗೆ ಹಿಂದಿನ ಸಮಷ್ಠಿ ಪ್ರಜ್ಞೆಯಲ್ಲಿ ಉತ್ತರವಿದೆ: ಶ್ರೀ ಪಡ್ರೆ

0

ಸಮಾಜದ ಇಂದಿನ ಬಹುತೇಕ ಸಮಸ್ಯೆಗಳಿಗೆ ನಮ್ಮ ಹಿಂದಿನ ಕಾಲದ ಸಮಷ್ಠಿ ಪ್ರಜ್ಞೆಯಲ್ಲಿ ಉತ್ತರವಿದೆ. ಎಂದು ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ ಮತ್ತು ಸಮ್ಮೇಳನ ಸ್ವಾಗತ ಸಮಿತಿ ನೇತೃತ್ವದಲ್ಲಿ ಇಂದು ಗೂನಡ್ಕ ಬೀಜದಕಟ್ಟೆಯ ಸಜ್ಜನ ಸಭಾಭವನದಲ್ಲಿ ನಡೆದ ಸುಳ್ಯ ತಾಲೂಕು ೨೬ನೇ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ” ನಾಡು ನುಡಿ ವರ್ತಮಾನದ ಸವಾಲುಗಳು” ಕುರಿತಾದ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನುಷ್ಯ ಪ್ರೀತಿ ಮತ್ತು ಹಸಿರು ಪ್ರೀತಿ ಇರುವ ಊರುಗಳಲ್ಲಿ ಪವಾಡಗಳೇ ನಡೆಯುತ್ತದೆ. ಕೃಷಿ ಮತ್ತು ಪರಿಸರದ ಕುರಿತು ಮರು ಅವಲೋಕನ, ಮರು ವಿಮರ್ಶೆ ಮಾಡಬೇಕಿದೆ ಎಂದವರು ಹೇಳಿದರು.

ಲೇಖಕಿ, ಕವಯತ್ರಿ ಸಂಗೀತ ರವಿರಾಜ್ ಅವರು “ಸಾಹಿತ್ಯ- ವರ್ತಮಾನದ ಸವಾಲುಗಳು” ಕುರಿತು ವಿಚಾರ ಮಂಡಿಸಿದರು.

ಲೇಖಕ, ಪರಿಸರವಾದಿ ಗೋಪಾಲ ಪೆರಾಜೆ ಅವರು ” ಕೃಷಿ ಮತ್ತು ಪರಿಸರದ ಸವಾಲುಗಳು” ಕುರಿತು ವಿಚಾರ ಮಂಡನೆ ಮಾಡಿದರು.

ಸವಾದ್ ಗೂನಡ್ಕ ಸ್ವಾಗತಿಸಿ, ಜಗದೀಶ ರೈ ವಂದಿಸಿದರು. ಕಿಶೋರ್ ಕುಮಾರ್ ಕಿರ್ಲಾಯ ಕಾರ್ಯಕ್ರಮ ನಿರೂಪಿಸಿದರು.