ಡಿ.21 : ಕೊಪ್ಪತ್ತಡ್ಕ ಎಸ್.ಎನ್ ಮನ್ಮಥರವರ ಮನೆಗೆ ಆದಿಚುಂಚನಗಿರಿ ಸ್ವಾಮೀಜಿಗಳ ಆಗಮನ – ಪೂರ್ವಭಾವಿ ಸಭೆ

0

ಐವರ್ನಾಡು ಗ್ರಾಮದ ಕೊಪ್ಪತ್ತಡ್ಕ ಮನೆ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್ .ಮನ್ಮಥರವರ ಮನೆಗೆ ಜಗದ್ಗುರು ಆದಿಚುಂಚನಗಿರಿ ಸಂಸ್ಥಾನದ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ಡಿ.21 ರಂದು ಸಂಜೆ ಗಂಟೆ 3.30ಕ್ಕೆ ಆಗಮಿಸಲಿದ್ದು ಆಶೀರ್ವಚನ ನೀಡಲಿದ್ದಾರೆ.


ಈ ಬಗ್ಗೆ ಪೂರ್ವಭಾವಿ ಸಭೆಯು ಡಿ.10 ರಂದು ಸಂಜೆ ಎಸ್.ಎನ್.ಮನ್ಮಥರವರ ಮನೆಯಲ್ಲಿ ನಡೆಯಿತು.
ಎಸ್.ಎನ್.ಮನ್ಮಥರವರು ಸ್ವಾಗತಿಸಿ,ಸ್ವಾಮೀಜಿಗಳು ಮನೆಗೆ ಆಗಮಿಸುವ ಬಗ್ಗೆ ಮಾಹಿತಿ ನೀಡಿದರು.


ಸಭೆಯಲ್ಲಿ ಎನ್.ಎ.ರಾಮಚಂದ್ರ, ಬಾಲಕೃಷ್ಷ ಬೊಳ್ಳೂರು, ರಮೇಶ ಮಿತ್ತಮೂಲೆ, ದಾಸಪ್ಪ ಕೋಡ್ತೀಲು,ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ,ಉಪಾಧ್ಯಕ್ಷೆ ಸುಜಾತ ಪವಿತ್ರಮಜಲು, ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಕರ್ಮಜೆ,ಅಮರಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ಕೊರತ್ಯಡ್ಕ, ಸಾವಿತ್ರಿ ದೊಡ್ಡಮನೆ, ಶಾಂತಾರಾಮ ಕಣಿಲೆಗುಂಡಿ, ವಾಸುದೇವ ಬೊಳುಬೈಲು, ರವಿನಾಥ ಮಡ್ತಿಲ, ವೆಂಕಪ್ಪ ಗೌಡ ಜೆ.ಟಿ, ಅರುಣ ನಾಯರ್ ಕಲ್ಲು, ಶೇಖರ ಮಡ್ತಿಲ, ಅನಂತ ಖಂಡಿಗೆಮೂಲೆ , ಕುಶಾಲಪ್ಪ ಪೆರುವಾಜೆ, ಮಹೇಶ ಜಬಳೆ , ಶಾಂತಾರಾಮ ಕಣಿಲೆಗುಂಡಿ , ದೇವಿಪ್ರಸಾದ್ ಎಸ್.ಎನ್., ಚಂದ್ರಕಾಂತ ಕೋಡ್ತೀಲು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.