ರಂಗ ಮಯೂರಿ ಕಲಾಶಾಲೆ ಪ್ರಸ್ತುತ ಪಡಿಸುತ್ತಿದೆ… “ವಿಶ್ವ ಮಾನವ” ರಂಗ ರೂಪಕ

0

ಪ್ರದರ್ಶನಕ್ಕೆ ಸಿದ್ದ

“ಪ್ರತಿಯೊಂದು ಮಗುವೂ ಹುಟ್ಟುತ್ತಲೇ – ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು…” ಈ ರೀತಿ ಕುವೆಂಪುರವರ ಜಾತ್ಯಾತೀತ ಮನೋಭಾವವನ್ನ ಒಳಗೊಂಡ ‘ವಿಶ್ವ ಮಾನವ’ ಸಂದೇಶವನ್ನು ಇದೀಗ “ವಿಶ್ವ ಮಾನವ” ರಂಗರೂಪಕವಾಗಿ ಕಾಣಬಹುದಾಗಿದೆ.
ಕ್ಷಣ ಕ್ಷಣವೂ ಮೈನವಿರೇಳಿಸುವ ದೇಸೀಯತೆ, ಹಾಡು, ನೃತ್ಯ, ದೃಶ್ಯ ಸಂಯೋಜನೆ,ಸಂಭಾಷಣೆಯೊಂದಿಗೆ ಸಾಗುವ ರಂಗ ರೂಪಕ
ಸುಮಾರು ಒಂದು ಗಂಟೆ ಹದಿನೈದು ನಿಮಿಷ ಒಳಗೊಂಡಿದೆ.


ಪ್ರತೀ ನಿಮಿಷಕ್ಕೂ ಪ್ರಾಮುಖ್ಯತೆಯನ್ನು ನೀಡುತ್ತಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ಸಂದರ್ಭಕ್ಕೆ ಅನುಗುಣವಾಗಿ ‘ವಿಶ್ವ ಮಾನವ’ ರಂಗರೂಪಕವನ್ನು ಪ್ರಸ್ತುತಪಡಿಸಲಾಗಿದೆ.
ಸುಮಾರು 25 ಕ್ಕಿಂತಲೂ ಹೆಚ್ಚಿನ ಕಲಾವಿದರನ್ನು ಒಳಗೊಂಡ ಈ ರಂಗರೂಪಕವನ್ನ ರಂಗ ನಿರ್ದೇಶಕ ಲೋಕೇಶ್ ಊರುಬೈಲ್ ಇವರು ರಚಿಸಿ, ನಿರ್ದೇಶಿಸಿರುತ್ತಾರೆ.

ರಂಗಸಜ್ಜಿಕೆಯಲ್ಲಿ ಲೋಹಿತಾಶ್ವ ಪರಮಂಡಲ, ನೃತ್ಯ ಸಂಯೋಜನೆ ಶ್ರೀಮತಿ ಲಿಖಿತಾ ಗುಡ್ಡೆಮನೆ , ಸಂಗೀತ ಸಂಯೊಜಕರಾಗಿ ರೋಹಿತ್ ಮಲ್ಪೆ ಹಾಗು ಸೌಂಡ್ ರೆಕಾರ್ಡಿಂಗ್ ನಲ್ಲಿ ಗ್ಲೋವಿಂಗ್ ವೇವ್ ರೆಕಾರ್ಡಿಂಗ್ ಸುಳ್ಯ ಇವರು ಸಹಕರಿಸಿರುತ್ತಾರೆ.
ವಿಶ್ವಮಾನವ ರಂಗ ರೂಪಕದ ಪ್ರದರ್ಶನಕ್ಕಾಗಿ ರಂಗ ಮಯೂರಿಕ ಕಲಾಶಾಲೆಯನ್ನು ಸಂಪರ್ಕಿಸಲು ಕೋರಲಾಗಿದೆ.