ಯೇನೆಕಲ್ಲು ಸ.ಹಿ.ಪ್ರಾ. ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಮತ್ತು ದತ್ತಿನಿಧಿ ಪುರಸ್ಕಾರ ಕಾರ್ಯಕ್ರಮ

0


ಸ.ಹಿ.ಪ್ರಾ. ಶಾಲೆ ಯೇನೆಕಲ್ಲಿನಲ್ಲಿ ಡಿ. 10ರಂದು ವಾರ್ಷಿಕ ಕ್ರೀಡೋತ್ಸವ ಮತ್ತು ದತ್ತಿನಧಿ ಪುರಸ್ಕಾರ ಸಮಾರಂಭವನ್ನು ನಡೆಯಿತು. ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಅಶೋಕ್ ಕುಮಾರ್ ಅಂಬೆಕಲ್ಲು ವಹಿಸಿದ್ದರು. ಕ್ರೀಡಾ ಕೂಟವನ್ನು ಸುಬ್ರಹ್ಮಣ್ಯ ಗ್ರಾ. ಪಂ. ಅಧ್ಯಕ್ಷೆ ಶ್ರೀ ಮತಿ ಲಲಿತ ಗುಂಡಡ್ಕ ದೀಪ ಬೆಳಗಿಸಿ ಉದ್ಘಾಟಿಸಿ ಕ್ರೀಡಾ ಕೂಟಕ್ಕೆ ಶುಭಹಾರೈಸಿದರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಇಂದಿರಾ ರಾಮಯ್ಯ ಮಾದನಮನೆ ಧ್ವಜಾರೋಹಣ ಮಾಡಿದರು. ಸ.ಪೌಢಶಾಲೆ ಯೇನೆಕಲ್ಲು ಇದರ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಪಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುವನ್ನು ಸನ್ಮಾನಿಸಿ ಕ್ರೀಡಾಕೂಟಕ್ಕೆ ಶಭಹಾರೈಸಿದರು.


ಸಭಾವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ಮೋಹನ್ ಕೋಟಿಗೌಡನ ಮನೆ, ಶ್ರೀಮತಿ ಜಯಂತಿ ಪರಮಲೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯಕುಮಾರ್ ಅಮೈ, ಕಾರ್ಯದರ್ಶಿ ಶಿವಪ್ರಸಾದ್ ಮಾದನಮನೆ, ಯೇನೆಕಲ್ಲು ಪ್ರೌಢಶಾಲಾ ಮುಖ್ಯ ಗುರುಗಳಾದ ರಮೇಶ್, ಯೇನೆಕಲ್ಲು ಯುವಕಮಂಡಲ ಅಧ್ಯಕ್ಷ ರಾದ ಮನುದೇವ್ ಪರಮಲೆ, ಯೇನೆಕಲ್ಲು ಸ.ಹಿ.ಪ್ರಾ. ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಚಂದ್ರಿಕಾ ಬಿ.ಸಿ, ನಿವೃತ್ತ ಶಿಕ್ಷಕಿ ಶ್ರೀಮತಿ ಲೀಲಾವತಿ ವಾಸುದೇವ ಪರಮಲೆ, ಹಾಲು ಉತ್ಪಾದಕರ ಸಹಕಾರಿ ಸಂಘ ಯೇನೆಕಲ್ಲು ಇದರ ಅಧ್ಯಕ್ಷ ಭರತ್ ನೆಕ್ರಾಜೆ ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಶ್ರೀಮತಿ ರತ್ನಾವತಿ, ಶ್ರೀಮತಿ ಗೀತಾ, ಶ್ರೀಮತಿ ಸುಮಿತ್ರಾ, ಕು. ಸ್ಮೀತಾ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳ ಫಲಿತಾಂಶ ಪಟ್ಟಿಯನ್ನು ವಾಚಿಸಿದರು.
ಕ್ರೀಡಾ ಕೂಟದಲ್ಲಿ ವಿದ್ಯಾರ್ಥಿಗಳ ಪೋಷಕರು, ದತ್ತಿನಿಧಿ ದಾನಿಗಳು, ಹಿರಿಯ ವಿದ್ಯಾರ್ಥಿಗಳು, ಸಾರ್ವಜನಿಕರು ವಿದ್ಯಾರ್ಥಿಗಳು, ಅಂಗನವಾಡಿ ಶಿಕ್ಷಕಿಯರು, ಮಕ್ಕಳು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಚಂದ್ರಿಕಾ ಬಿ.ಸಿ. ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಕಮಲ ಸಿ ವಂದಿಸಿದರು. ಶ್ರೀಮತಿ ಅಂಬಿಕಾ ಎನ್ ಕಾರ್ಯ ಕ್ರಮ ನಿರೂಪಿಸಿದರು. ಪೋಷಕರಿಗೆ, ಹಿರಿಯ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಅಂಗನವಾಡಿ ಪುಟಾಣಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ಕ್ರೀಡಾ ನಿರ್ಣಾಯಕರಾಗಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ನಾಗರಾಜ ಪರಮಲೆ, ಶಿವರಾಮ್ ಯೇನೆಕಲ್ಲು, ಶ್ರೀಮತಿ ಇಂದಿರಾ ಮಾದನಮನೆ ಹಾಗೂ ನೇಲ್ಯಡ್ಕ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ವಿಜಯ್ ಕುಮಾರ್ ಅಮೈ ಸಹಕರಿಸಿದರು.