ಕರಿಕ್ಕಳ:ರೈತ ಸ್ನೇಹಿ ಅಡಿಕೆ ಸುಲಿಯುವ ಘಟಕ ಶುಭಾರಂಭ

0

ಪಂಬೆತ್ತಾಡಿ ಗ್ರಾಮದ ಕರಿಕ್ಕಳದಲ್ಲಿ ರೈತ ಸ್ನೇಹಿ ಅಡಿಕೆ ಸುಲಿಯುವ ಘಟಕ ಇಂದು ಉದ್ಘಾಟನೆಗೊಂಡಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯ ಮಹೇಶ್ ಕುಮಾರ್ ಕರಿಕ್ಕಳ ರವರು ಈ ಕೇಂದ್ರವನ್ನು ಉದ್ಘಾಟಿಸಿ ಶುಭಹಾರೈಸಿದರು. ಬೆಳಗ್ಗೆ ಗಣ ಹವನ ನಡೆದ ಬಳಿಕ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮರಕಡ ಗಂಗಾಧರ ಗೌಡ, ಪ್ರಸಾದ್ ಜಾಕೆ ವಿಶ್ವನಾಥ ಜಾಕೆ, ರಾಜೇಶ್ ಕುದ್ವ, ಲಿಜೋ ಸೆಬಾಸ್ಟಿನ್, ಅರ್ಜುನ್ ಹೊಸಹಿತ್ಲು, ಸುಬ್ಬಪ್ಪ ಕರಿಕ್ಕಳ, ಪ್ರೇಮ ಸುತ್ತುಕೋಟೆ, ಬೆಳ್ಳಿಯಪ್ಪ ಗೌಡ, ಕಿರಣ್ ಭಿಮಗುಳಿ, ದಿನೇಶ್ ಪಾಟಾಜೆ, ಪ್ರಕಾಶ್ ಮಾಣಿಬೈಲು, ಪ್ರಸಾದ್ ಮಾಣಿಬೈಲು, ಅಮಿತಾ ಸುತ್ತುಕೋಟೆ, ಭೀನಕುಮಾರಿ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರುಗಳಾದ ಕುಲದೀಪ್ ಸುತ್ತುಕೋಟೆ ಸ್ವಾಗತಿಸಿ ಮಹೇಶ್ ಮಾಣಿಬೈಲು ವಂದಿಸಿದರು. ಈ ಸಂಸ್ಥೆಯಲ್ಲಿ ಅಡಿಕೆ ಸಿಪ್ಪೆ ಸುಲಿದು ಪಟೋರ, ಚೆಪ್ಪುಗೋಟು, ಕರಿಗೋಟು ಬೇರ್ಪಡಿಸಿ ಕೊಡುವ ವ್ಯವಸ್ಥೆ ಇರುವುದಾಗಿ ಮಾಲಕರು ತಿಳಿಸಿದ್ದಾರೆ.