ಅರಂತೋಡು: ಶ್ರೀ ತಂಬುರಾಟಿ ಭಗವತಿ ಸೇವಾ ಸಮಿತಿ ವಾರ್ಷಿಕ ಮಹಾಸಭೆ

0

ಶ್ರೀ ತಂಬುರಾಟಿ ಭಗವತಿ ಸೇವಾ ಸಮಿತಿ ಅರಂತೋಡು ಇದರ ವಾರ್ಷಿಕ ಮಹಾ ಸಭೆಯು ಡಿ. 11ರಂದು ರಬ್ಬರ್ ಉತ್ಪಾದಕರ ಸಂಘದ ಸಭಾ ಭವನ ಅರಂತೋಡಿನಲ್ಲಿ ನಡೆಯಿತು.

ಸಮಿತಿಯ ಅಧ್ಯಕ್ಷ  ಶ್ರೀಜಿತ್ ಎ ಜಿ.ರವರ ಅಧ್ಯಕ್ಷ ತೆಯಲ್ಲಿ ನಡೆಯಿತು.
ಸಭೆಯಲ್ಲಿ ಮುಖ್ಯ ಅತಿಥಿ ಗಳಾಗಿ ಆಗಮಿಸಿದ ಕುತ್ತಿಕೋಲು ಶ್ರೀ ತಂಬುರಾಟಿ ಭಗವತಿ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಕುಂಞ್ಞಿಕಣ್ಣನ್ ಬೇಡಗ, ಉಪಾಧ್ಯಕ್ಷ ಪವಿತ್ರನ್ ಗುಂಡ್ಯರವರು ಮಾತನಾಡಿ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವ ಸ್ಥಾನ ದಲ್ಲಿ ನಡೆಯಲಿರುವ ದೈವಕಟ್ಟು ಮಹೋತ್ಸವಕ್ಕೆ ಸಂಬಂಧ ಪಟ್ಟಂತೆ ಸಮಿತಿಯ ಜವಾಬ್ದಾರಿ ಯ ವಿವರಿಸದರಲ್ಲದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯ ಪ್ರವೃತ್ತರಾಗುವಂತೆ ಸಲಹೆ ನೀಡಿದರು ಸಭೆಯ ಅಧ್ಯಕ್ಷ ತೆಯನ್ನು ವಹಿಸಿದ ಶ್ರೀ ಜಿತ್ ರವರು ಮಾತನಾಡಿ ದೈವಕಟ್ಟು ಮಹೋತ್ಸವ ಕ್ಕೆ ಎಲ್ಲರ ಸಹಕಾರ ಕೋರಿದರಲ್ಲದೆ ಈ ಬಗ್ಗೆ ಚರ್ಚಿಸಲು ಜನವರಿ 8 ರಂದು ಕುಂಬಳಚೆರಿ ಯಲ್ಲಿ ವಿಶೇಷ ಸಭೆ ನಡೆಯಲಿದ್ದು ಈ ಸಭೆ ಯಲ್ಲಿ ಸಮುದಾಯ ಬಾಂದವರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸಮಿತಿ ಯ ಕಾರ್ಯದರ್ಶಿ ಭಾನುಪ್ರಕಾಶ್ ಕೊಡಂಕೇರಿ ಯವರು ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.
ವೇದಿಕೆ ಯಲ್ಲಿ ತಂಬುರಾಟಿ ಭಗವತಿ ಕ್ಷೇತ್ರದ ಮಹಿಳಾ ಸಮಿತಿ ಸದಸ್ಯೆ ಶಾಂತಕುಮಾರಿ, ತಂಬುರಾಟಿ ಸೇವಾ ಸಮಿತಿಯ ಕೋಶಾ ಧಿಕಾರಿ ಪ್ರದೀಪ್ ಕೆ, ಭಾರತೀಯ ತೀಯ ಸಮಾಜ ಗ್ರಾಮ ಸಮಿತಿ ಅರಂತೋಡು ಇದರ ಅಧ್ಯಕ್ಷರಾದ ಅಂಬುಜಾಕ್ಷ ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಸಮಿತಿಯ ವ್ಯಾಪ್ತಿಯ ಹೆಚ್ಚಿನ ಸದಸ್ಯರು, ಮಹಿಳಾ ಸಮಿತಿ ಯ ಸದಸ್ಯರು  ಉಪಸ್ಥಿತರಿದ್ದರು. ಕುಮಾರಿ ಹರೀಷ್ಮ ಮತ್ತು ಕುಮಾರಿ ಸುಶ್ಮಿತಾ ರವರು ಪ್ರಾರ್ಥನೆ ಗೈದರು. ಕಾರ್ಯ ದರ್ಶಿ ಭಾನು ಪ್ರಕಾಶ್ ಕೊಡಂಕೇರಿ ಯವರು ಸ್ವಾಗತಿಸಿ, ಮಹಿಳಾ ಸಮಿತಿ ಅಧ್ಯಕ್ಷೆ ಇಂದಿರಾ ಪೆರಾಜೆ ವಂದಿಸಿದರು.