ಗುತ್ತಿಗಾರು:ಶ್ರೀ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಶ್ರೀ ಅಯ್ಯಪ್ಪ ಸೇವಾ ಸಮಿತಿ ಗುತ್ತಿಗಾರು ವತಿಯಿಂದ ಡಿ.30 ರಂದು ಬೆಳಗ್ಗೆ ಶ್ರೀ ಗಣಪತಿ ಹೋಮ, ಸಾಮೂಹಿಕ ಶನಿಪೂಜೆ ನಡೆಯಲಿದ್ದು ಸಂಜೆ ಮಣಿಕಂಠ ಮಹಿಮೆ ಎಂಬ ನಾಟಕ ಪ್ರದರ್ಶನ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಡಿ.9ರಂದು ಶ್ರೀ ಕೃಷ್ಣ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

ಈ ಸಂದರ್ಭ ಸಮಿತಿಯ ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ಸುರೇಶ್ ಕಂದ್ರಪ್ಪಾಡಿ, ಮೋಹನ್ ಕಡ್ತಲ್ ಕಜೆ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ದಯಾನಂದ ಮುತ್ಲಾಜೆ ಕಿಶೋರ್ ಕುಮಾರ್ ಬೊಮ್ಮದೇರೆ, ಜಯಪ್ರಕಾಶ್ ಮೊಗ್ರ, ಸತೀಶ್ ಬಂಬುಳಿ, ಮೋಹನದಾಸ್, ವಿಜೇಶ್ ಹಿರಿಯಡ್ಕ, ನವೀನ್ ಪುಲ್ಲಡ್ಕ, ದಯಾನಂದ ಕನ್ನಡ್ಕ, ಜಗದೀಶ ಬಾಕಿಲ ಮತ್ತಿತರರು ಉಪಸ್ಥಿತರಿದ್ದರು.