ಪಂಬೆತ್ತಾಡಿ: ಯಕ್ಷಗಾನ ತಾಳಮದ್ದಳೆ-ಉದ್ಘಾಟನೆ

0


ಶ್ರೀ ಶಾರದಾಂಬ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ ಇದರ ಆಶ್ರಯದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪಂಬೆತ್ತಾಡಿ
, ಪಂಚಶ್ರೀ ಯುವಕ ಮಂಡಲ ಪಂಬೆತ್ತಾಡಿ, ಅಕ್ಷತಾ ಯುವತಿ ಮಂಡಲ ಪಂಬೆತ್ತಾಡಿ, ಅಮೃತಾ ಮಹಿಳಾ ಮಂಡಲ ಪಂಬೆತ್ತಾಡಿ ಇದರ ಸಹಯೋಗದಲ್ಲಿ ತಾಳ ಮದ್ದಳೆ ಸಪ್ತಾಹ 2022 -2023 ಡಿ.11 ರಂದು ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಠಾರದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಾಧವ ಗೌಡ ಜಾಕೆ ವಹಿಸಿದ್ದರು. ಕಲ್ಮಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ದೀಪ ಪ್ರಜ್ವಲನೆ ಗೊಳಿಸಿದರು.ಮುಖ್ಯ ಅತಿಥಿಗಳಾಗಿ ಸಂತೋಷ್ ಜಾಕೆ ಹಾಗೂ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಗೌಡ ಪುತ್ಯ ಪಂಬೆತ್ತಾಡಿ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಉಪಾಧ್ಯಕ್ಷ ಕುಲದೀಪ್ ಸುತ್ತುಕೋಟೆ . ಯುವಕ ಮಂಡಲದ ಅಧ್ಯಕ್ಷ ನಾಗಪ್ಪ ಗೌಡ ಪಂಜದಬೈಲು . ಯುವತಿ ಮಂಡಲ ಅಧ್ಯಕ್ಷೆ ಶ್ರೀಮತಿ ಶ್ವೇತಾ ಪಂಜದಬೈಲು. ಮಹಿಳಾ ಮಂಡಲ ಅಧ್ಯಕ್ಷೆ ಶ್ರೀಮತಿ ಅನಿತಾ ಕಾಂತುಕುಮೇರಿ ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ದೈವನರ್ತಕ ನಾಟಿ ವೈದ್ಯ ಬಾಬು ಅಜಿಲ ಕರಿಕ್ಕಳ ಇವರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಪುಷ್ಪಾವತಿ ಬೀಮಗುಡ್ಡೆ ಪ್ರಾರ್ಥಿಸಿದರು ಗುರುಪ್ರಸಾದ್ ತೋಟ ಕಾರ್ಯಕ್ರಮ ನಿರೂಪಿಸಿದರು ಜಗದೀಶ ಮಠ ವಂದಿಸಿದರು.‌ಬಳಿಕ ‘ಮೋಕ್ಷ ಸಂಗ್ರಾಮ ಯಕ್ಷಗಾನ ತಾಳಮದ್ದಳೆ ‘
ನಡೆಯಿತು ಹಿಮ್ಮೇಳದಲ್ಲಿ
ಭಾಗವತರಾಗಿ ಪ್ರಶಾಂತ್ ರೈ ಪಂಜ , ಚೆಂಡೆ ಕುಮಾರ ಸುಬ್ರಹ್ಮಣ್ಯ ವಳಕುಂಜ ,ಮದ್ದಳೆ ಚಂದ್ರಶೇಖರ ಗುರುವಾಯನಕೆರೆ, ಅರ್ಥಧಾರಿಗಳಾಗಿ
ಅಶೋಕ್ ಭಟ್ ಉಜಿರೆ, ರಾಧಾಕೃಷ್ಣ ಕಲ್ಚಾರ್ ,ಸತ್ಯಶಂಕರ ಮಳಿಯಾಳ ,ಶಿವಕುಮಾರ್ ಗುತ್ತಿಗಾರು ಪಾಲ್ಗೊಂಡಿದ್ದರು.