ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾಲ್ಸೂರು ಜನ ಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾಗಿ ಭಾಸ್ಕರ ಅಡ್ಕಾರು ಆಯ್ಕೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಜಾಲ್ಸುರು ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ಅಡ್ಕಾರು ರವರು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯರಾಮ ರೈ ಜಾಲ್ಸುರು,
ಉಪಾಧ್ಯಕ್ಷರಾಗಿ ಮುರಳೀಧರ ಕೆಮನಬಳ್ಳಿ, ಕಾರ್ಯದರ್ಶಿಯಾಗಿ ವಲಯ ಮೇಲ್ವಿಚಾರಕ ತೀರ್ಥರಾಮ, ಜತೆ ಕಾರ್ಯದರ್ಶಿ ಗಳಾಗಿ ಶ್ರೀಮತಿ ತಿರುಮಲೇಶ್ವರಿ ಆರ್ಭಡ್ಕ , ಕೋಶಾಧಿಕಾರಿಗಳಾಗಿ ನ್ಯಾಯವಾದಿ ಜಯಪ್ರಕಾಶ್ ಬೈತಡ್ಕ ಆಯ್ಕೆಯಾಗಿದ್ದಾರೆ.
ಸದಸ್ಯರುಗಳಾಗಿ ಲೋಕನಾಥ ಬೊಳುಬೈಲು, ದಾಮೋದರ ಕೊಡ್ತಿಲು, ಕೃಷ್ಣಪ್ಪ ಜಾಲ್ಸುರು, ಆಯ್ಕೆಯಾಗಿದ್ದಾರೆ.
ಜನಜಾಗೃತಿ ವಲಯ ಅದ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ವಲಯ ಅಧ್ಯಕ್ಷ ರವಿ ಅಡ್ಕಾರು, ವಲಯದ ಎಲ್ಲ ಒಕ್ಕೂಟದ ಅಧ್ಯಕ್ಷರುಗಳು, ಪದಾಧಿಕಾರಿಗಳು, ನವಜೀವನ ಸದಸ್ಯರುಗಳು, ಮೇಲ್ವಿಚಾರಕರು, ವಲಯದ ಎಲ್ಲ ಸೇವಾಪ್ರತಿನಿಧಿ ಗಳು ಉಪಸ್ಥಿತರಿದ್ದರು.