ಅಂಜಲಿ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ ಮತ್ತು ಎಂ.ಬಿ ಫೌಂಡೇಶನ್ ವತಿಯಿಂದ ಗೈಡೆನ್ಸ್ ಕ್ವೆಸ್ಟ್ ಕಾರ್ಯಕ್ರಮ

0

ಅಂಜಲಿ ಎಜುಕೇಶನ್ ಅಂಡ್ ಚಾರಿಟಬಲ್ ಟ್ರಸ್ಟ್ ಮತ್ತು ಎಂ.ಬಿ ಫೌಂಡೇಶನ್ ರವರ ವತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಗೈಡೆನ್ಸ್ ಕ್ವೆಸ್ಟ್ ಕಾರ್ಯಕ್ರಮವನ್ನು ಸಂದೀಪ ಸ್ಪೆಷಲ್ ಸ್ಕೂಲಿನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಳ್ಯದ ಪ್ರತಿಷ್ಠಿತ ಐದು ಶಾಲೆಗಳಿಂದ 60 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬೆಳಗಿನ ಅವಧಿಯಲ್ಲಿ ಎಮ್. ಬಿ. ಫೌಂಡೇಶನ್ ಚೇರ್ಮನ್ ಆದ ಎಂ. ಬಿ ಸದಾಶಿವ ರವರು ಮಕ್ಕಳಿಗೆ ಸ್ಪರ್ಧಾ ಮನೋಭಾವದ ಬಗ್ಗೆ ತಿಳಿಸಿಕೊಟ್ಟರು. ಎರಡನೇ ಅವಧಿಯಲ್ಲಿ ಶ್ರೀಮತಿ ಮೀನಾಕುಮಾರಿ ಕೆ. ಸಮಲೋಚನೆ ಮನಃಶಾಸ್ತ್ರಜ್ಞರು ಒತ್ತಡ ನಿರ್ವಹಣೆ ಮತ್ತು ಆರೋಗ್ಯದ ಬಗ್ಗೆ ತಿಳಿಸಿದರು. ಮೂರನೇ ಅವಧಿಯಲ್ಲಿ ಅಂಜಲಿ ಮೌಂಟೇಸರಿ ಶಾಲೆಯ ಸಂಚಾಲಕರಾದ ಗೀತಾಂಜಲಿ ಅವರು ಸಂವಹನ ಕೌಶಲ್ಯದ ಬಗ್ಗೆ ತಿಳಿಸಿಕೊಟ್ಟರು. ಮಧ್ಯಾಹ್ನದ ಅವಧಿಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತರಾದ ಡಾ. ಶಿಕಾರಿಪುರ ಕೃಷ್ಣಮೂರ್ತಿ ಇವರು ಪರೀಕ್ಷೆ ಗೆಲ್ಲುವ ಗುಟ್ಟು ಎಂಬ ವಿಚಾರದ ಬಗ್ಗೆ ಸವಿಸ್ತಾರವಾಗಿ ಹಲವಾರು ಚಟುವಟಿಕೆಗಳೊಂದಿಗೆ ಮಕ್ಕಳ ಮನ ಮುಟ್ಟಿದರು.

ಈ ಕಾರ್ಯಕ್ರಮದಲ್ಲಿ ಅಂಜಲಿ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದಂತಹ ವಿಶ್ವನಾಥ್ ಕೆ.ಟಿ. ಆನಂದ್ ಖಂಡಿಗ ಸದಾನಂದ ಮಾವಾಜಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷರಾದಂತಹ ಶುಭಕರ ಬಿ.ಸಿ.ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸೃಜನ ಬಿ. ಎಸ್ ಮಾಡಿದರು. ಕೊನೆಯಲ್ಲಿ ಶುತರಾಜ್ ಬಿ ಎಸ್ ವಂದಿಸಿದರು.