ಮದುವೆ ದಿಬ್ಬಣದ ಇನೋವಾ ಕಾರು ಪರಪ್ಪೆಯಲ್ಲಿ ಪಲ್ಟಿ
ಸುಳ್ಯದ ತಾಯಿ ಮಗು ಮೃತ್ಯು

0


ಜಾಲ್ಸೂರು – ಕಾಸರಗೋಡು ರಸ್ತೆಯ ಪರಪ್ಪೆ ಬಳಿ ಮದುವೆ ದಿಬ್ಬಣ ಹೋಗುತ್ತಿದ್ದ ಇನೋವಾ ಕಾರೊಂದು ಸ್ಕಿಡ್ ಆಗಿ ಪಲ್ಟಿ ಹೊಡೆದ ಪರಿಣಾಮವಾಗಿ ಆ ವಾಹನದಲ್ಲಿದ್ದ ಸುಳ್ಯ ಮೂಲದ ತಾಯಿ ಮತ್ತು ಮಗು ಮೃತಪಟ್ಟು ನಾಲ್ವರು ತೀವ್ರ ಜಖಂಗೊಂಡ ಘಟನೆ ಇದೀಗ ನಡೆದಿದೆ.


ಸುಳ್ಯದ ನಾವೂರು ಬೋರುಗುಡ್ಡೆ ಅಬ್ದುಲ್ಲಾ ಎಂಬವರ ಪುತ್ರಿ, ಪರಪ್ಪೆಯ ಶಾನ್ ಎಂಬವರ ಪತ್ನಿ ೨೮ ವರ್ಷದ ಶಾಹಿನಾ ಹಾಗೂ ಮಗು ೩ ವರ್ಷ ಪ್ರಾಯದ ಶಜಾ ಮೃತಪಟ್ಟಿದ್ದಾರೆ. ಇನೋವಾ ಕಾರಲ್ಲಿದ್ದ ಇನ್ನು ನಾಲ್ವರು ತೀವ್ರ ಜಖಂಗೊಂಡಿದ್ದು, ಅವರನ್ನು ಕಾಸರಗೋಡು ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿದುಬಂದಿದೆ. ಮೃತಪಟ್ಟ ತಾಯಿ ಮತ್ತು ಮಗುವಿನ ಮೃತದೇಹಗಳನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ತರಲಾಗಿದೆ.