ಕೊಲ್ಲಮೊಗ್ರು: ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚಕ್ಕೆ ಸಹಾಯ ಹಸ್ತ ನೀಡಿದ ಕೆಪಿಸಿಸಿ ಸದಸ್ಯ ನಂದಕುಮಾರ್

0

ಆರ್ಥಿಕ ತೊಂದರೆಯಲ್ಲಿರುವ ಕೊಲ್ಲಮೊಗ್ರು ಗ್ರಾಮದ ವಂದನ ಶಿವಾಲ ಮತ್ತು ತನುಜಾ ಮಲ್ಲಾಜೆ ಎಂಬ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಕೆಪಿಸಿಸಿ ಸದಸ್ಯ ಎಂ.ಎಚ್‌.ನಂದಕುಮಾರ್ ನೆರವು ನೀಡಿದ್ದಾರೆ.
ಮಂಡ್ಯದಲ್ಲಿ ನರ್ಸಿಂಗ್ ವಿದ್ಯಾಭ್ಯಾಸ ಪಡೆಯುತ್ತಿರುವ ಇಬ್ಬರು ವಿದ್ಯಾರ್ಥಿನಿಯರ ಮನೆಯವರಿಗೆ ಶೈಕ್ಷಣಿಕ ವೆಚ್ಚ ಭರಿಸಲು ಭಾರಿ ತೊಂದರೆಯಾಗಿದ್ದು ಇದನ್ನು ಮನಗಂಡು ಈ ಎರಡು ವಿದ್ಯಾರ್ಥಿನಿಯರಿಗೆ ನಂದಕುಮಾರ್ ತಲಾ ರೂ 5000ದಂತೆ ಡಿ.4 ರಂದು ನೀಡಿರುತ್ತಾರೆ. ಅಲ್ಲದೇ ಪ್ರತಿ ತಿಂಗಳು ರೂ 500ರಂತೆ ಸಹಾಯ ಧನ ಶೈಕ್ಷಣಿಕ ಅವಧಿ ಮುಗಿಯುವಲ್ಲಿವರೆಗೆ ನೀಡಿರುವುದಾಗಿ ಭರವಸೆ ನೀಡಿದ್ದಾರೆ. ಸಹಾಯ ಹಸ್ತ ಹಸ್ತಾಂತರ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ್, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.