ಸಂಪಾಜೆ ಗ್ರಾ.ಪಂ. ಸದಸ್ಯತ್ವಕ್ಕೆ ಮೂವರು ಸದಸ್ಯರು ನೀಡಿದ್ದ ರಾಜೀನಾಮೆ ಅಂಗೀಕಾರ

0

ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಉಪಾಧ್ಯಕ್ಷೆ ಲಿಸ್ಸಿ ಮೋನಾಲಿಸ, ಸದಸ್ಯರುಗಳಾದ ಶೌವಾದ್ ಗೂನಡ್ಕ ಹಾಗೂ ವಿಮಲಪ್ರಸಾದರ ರಾಜೀನಾಮೆ ಅಂಗೀಕಾರ ಗೊಂಡಿರುವುದಾಗಿ ತಿಳಿದುಬಂದಿದೆ.

ಸಂಪಾಜೆ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಬಿಕ್ಕಟ್ಟು ಹಿನ್ನಲೆಯಲ್ಲಿ ಪಂಚಾಯತ್ ಸದಸ್ಯರಾದ ಸೋಮಶೇಖರ್ ಕೊಯಿಂಗಾಜೆ, ಉಪಾಧ್ಯಕ್ಷೆ ಲಿಸ್ಸಿ ಮೋನಾಲಿಸ, ಸದಸ್ಯರಾದ ಶೌವಾದ್ ಗೂನಡ್ಕ ಹಾಗೂ ವಿಮಲಪ್ರಸಾದ್ ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ಬಳಿಕ ಸುಳ್ಯದಲ್ಲಿ ಕಾಂಗ್ರೆಸ್ ಮುಖಂಡರ ಮಾತುಕತೆ ಹಿನ್ನಲೆಯಲ್ಲಿ ಸೋಮಶೇಖರ್ ಕೊಯಿಂಗಾಜೆ ಪಂಚಾಯತ್ ಸದಸ್ಯತ್ವಕ್ಕೆ ನೀಡಿದ್ದ ರಾಜೀನಾಮೆ ಹಿಂಪಡೆದಿದ್ದರು. ಆದರೆ ಲಿಸ್ಸಿ ಮೋನಾಲಿಸ, ಶೌವಾದ್ ಗೂನಡ್ಕ, ವಿಮಲಪ್ರಸಾದ್ ರಾಜೀನಾಮೆ ಹಿಂಪಡೆಯದಿದ್ದುದರಿಂದ, ರಾಜೀನಾಮೆ ಸಲ್ಲಿಸಿ 15 ದಿನಗಳಾಗಿದ್ದುದರಿಂದ ರಾಜೀನಾಮೆ ಅಂಗೀಕಾರ ಗೊಂಡಿರುವುದಾಗಿ ತಿಳಿದುಬಂದಿದೆ.