ನೆಹರು ಮೆಮೋರಿಯಲ್ ಕಾಲೇಜು: ಕೌಶಲ್ಯ ನೋಂದಣಿ ಮಾರ್ಗದರ್ಶನ & ಮೃದು ಕೌಶಲ್ಯ ತರಬೇತಿ ಸಮಾರೋಪ ಸಮಾರಂಭ

0


ನೆಹರು ಮೆಮೋರಿಯಲ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಕೌಶಲ್ಯ ನೋಂದಣಿ ಕಾರ್‍ಯಗಾರವನ್ನು, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ವತಿಯಿಂದ ಜಿಲ್ಲಾ ಸಂಯೋಜಕರಾದ ರೋಹಿತ್ ಅವರ ಮಾರ್ಗದರ್ಶನದಲ್ಲಿ ದ. ೧೦ ರಂದು ನೆರವೇರಿಸಲಾಯಿತು.

ಈ ಕಾರ್ಯಾಗಾರದಲ್ಲಿ ಕೌಶಲ್ಯ ನೋಂದಣಿಯ ಮಹತ್ವವನ್ನು ವಿವರಿಸಲಾಯಿತು. ಕಾಲೇಜಿನ ವೃತ್ತಿ ನಿಯೋಜನಾ ಕೋಶದ ಅಧಿಕಾರಿ ಡಾ. ವಿಜಯಲಕ್ಷ್ಮಿ ಎನ್.ಎಸ್ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದರು. ಪದಾಧಿಕಾರಿಗಳಾದ ಶ್ರೀಮತಿ ದಿವ್ಯಾ ಟಿ.ಎಸ್, ವಿಷ್ಣು ಪ್ರಶಾಂತ್ ಬಿ, ಹರಿಪ್ರಸಾದ್ ಎ.ವಿ ಉಪಸ್ಥಿತರಿದ್ದು, ಕಾರ್ಯಾಗಾರದ ಯಶಸ್ವಿಗೆ ಸಹಕರಿಸಿದರು.