ಸುಬ್ರಹ್ಮಣ್ಯ: ಲಯನ್ಸ್ ವಲಯ ಸಮ್ಮಿಲನ

0

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಕಡಬ ಮತ್ತು ಲಯನ್ಸ್ ಕ್ಲಬ್ ಪಂಜ ಇವರ ಜಂಟಿ ಆಶ್ರಯ ದಲ್ಲಿ ಡಿ. 11 ರಂದು ಕಲ್ಲಾಜೆಯಲ್ಲಿ ವಲಯ ಸಮ್ಮಿಲ ನ ನಡೆಯಿತು. ಉದ್ಘಾಟನೆಯನ್ನು ವಲಯದ ಶ್ರೀಮತಿ ಶ್ಯಾಮಲ ಸಿದ್ದಲಿಂಗ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ವಲಯ ಅಧ್ಯಕ್ಷ ರಾದ ಲ। ಡಾ ಸಿದ್ಧಲಿಂಗ ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ದ ಅಧ್ಯಕ್ಷರಾದ ಲಯನ್ ಪ್ರೋ. ರಂಗಯ್ಯ ಶೆಟ್ಟಿಗಾರು ಅವರು ವಹಿಸಿದ್ದರು.ಪಂಜ ಲಯನ್ಸ್ ಕ್ಲಬ್ ನ ಸಂತೋಷ್ ಜಾಕೆ, ಲ। ಜಾಕೆ ಮಾದವಗೌಡ ಮತ್ತು ಲ। ನಿತ್ಯಾನಂದ ಮುಂಡೋಡಿಯವರು ಡಾ। ಸಿದ್ದಲಿಂಗ ದಂಪತಿಗಳನ್ನು ಸನ್ಮಾನಿಸಿದರು.

ಲ। ಸತೀಶ್ ಕೂಜುಗೋಡು ವಂದಿಸಿದರು. ಲಯನ್ ತುಕಾರಾಂ ಏನೆಕಲ್ ಅವರು ಕ್ರೀಡಾ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಶ್ರೀಮತಿ ವಿಮಲರಂಗಯ್ಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ ಲಯನ್ ಪದಾಧಿಕಾರಿಗಳಾದ ರಾಮಚಂದ್ರ ಪಳಂಗಾಯ, ಅಭಿಷೇಕ್ , ಥೋಮಸ್, ಕರುಣಾಕರ ಎಣ್ಣೆಮಜಲು ಉಪಸ್ಥಿತರಿದ್ದರು.ಪಂಜ ಲಯನ್ಸ್ ಕ್ಲಬ್ ನ ಅಧ್ಯಕ್ಷಕ್ಷರಾದ ಲ। ಪುರುಷೋತ್ತಮ ದಂಬೆಕೋಡಿಯವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಕಡಬ ಲಯನ್ಸ್ ಕ್ಲಬ್ ನ ಹಿರಿಯ ಸದಸ್ಯರಾದ ಸ್ಕರಿಯ ಎನ್ ಅವರ ನುಡಿನಮನ ಕಾರ್ಯಕ್ರಮ ವನ್ನು ಕಡಬ ಲಯನ್ಸ್ ಕ್ಲಬ್ ನ ಅದ್ಯಕ್ಷರಾದ ಜೋಸ್ ಕೆ. ಜೆ ನೆರವೇರಿಸಿದರು.
ಕಾರ್ಯಕ್ರಮ ದ ಸಂಯೋಜಕರಾದ ಲ। ಶಶಿಧರ ಪಳಂಗಾಯ ಪ್ರಾಸ್ತಾವಿಕವಾಗಿ ಮಾತಾಡಿದರು.