ಕೊಯಿಕುಳಿ ಹಿ.ಪ್ರಾ.ಶಾಲೆಗೆ ಕೋಟೆ ಫೌಂಡೇಶನ್ ವತಿಯಿಂದ ಸ್ಮಾರ್ಟ್ ಟಿವಿ ಕೊಡುಗೆ

0


ಸರಕಾರಿ ಶಾಲೆಗಳಿಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸಿ ವಿದ್ಯಾರ್ಥಿಗಳಿಗೆ ನೆರವಾಗುತ್ರಿರುವ ಕೋಟೆ ಫೌಂಡೇಶನ್ ದುಗ್ಗಲಡ್ಕದ ಕೊಯಿಕುಳಿ ಸರಕಾರಿ ಹಿ. ಪ್ರಾ ಶಾಲೆಗೆ ಸ್ಮಾರ್ಟ್ ಟಿವಿ ಕೊಡುಗೆಯನ್ನು ನೀಡಿದೆ.


ಈ ಕೊಡುಗೆ ನೀಡುವಲ್ಲಿ ಪ್ರದೀಪ್ ಉಬರಡ್ಕ ಮತ್ತು ಸುರೇಶ್ಚಂದ್ರ ಕಮಿಲ ಸಹಕರಿಸಿರುತ್ತಾರೆ.
ಅಲ್ಲದೆ ಶಾಲೆಗೆ ವೈಫೈ ನೆಟ್ ವರ್ಕ್ ಸಂಪರ್ಕದ ವ್ಯವಸ್ಥೆಯನ್ನು ಕೂಡ ಸುರೇಶ್ಚಂದ್ರ ಕಮಿಲ ಮಾಡಿರುವುದಾಗಿ ಶಾಲಾ ಮುಖ್ಯ ಶಿಕ್ಷಕ ಮಾಧವ ಗೌಡ ಎಂ.ತಿಳಿಸಿದ್ದಾರೆ.