ಅಡ್ಕಾರಿನಲ್ಲಿ ಧರ್ಮಸ್ಥಳ ಯೋಜನೆಯ ಕೇಂದ್ರ ಒಕ್ಕೂಟ ಪದಗ್ರಹಣ, ನವಜೀವನ ಸದಸ್ಯರ ಸಮಾವೇಶ ಮತ್ತು ಒಕ್ಕೂಟಗಳ ಸಾಧನಾ ಸಮಾವೇಶ, ಯೋಜನೆಯ ಮುಖಾಂತರ ಸದೃಢ ಸಮಾಜದ ನಿರ್ಮಾಣವಾಗಿದೆ-ಅನಿಲ್ ಕುಮಾರ್

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸುಳ್ಯ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸುಳ್ಯ ಇದರ ಆಶ್ರಯದಲ್ಲಿ ಕೇಂದ್ರ ಒಕ್ಕೂಟ ಪದಗ್ರಹಣ ನವಜೀವನ ಸದಸ್ಯರ ಸಮಾವೇಶ ಮತ್ತು ಒಕ್ಕೂಟಗಳ ಸಾಧನಾ ಸಮಾವೇಶವು ಅಡ್ಕಾರ್ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ಡಿ.14 ರಂದು ನಡೆಯಿತು.

ಬೆಳಗ್ಗೆ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಎನ್.ಎ.ರಾಮಚಂದ್ರ ವಹಿಸಿದ್ದರು.


ಸಮಾರಂಭದ ಉದ್ಘಾಟನೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ದೀಪ ಬೆಳಗಿಸಿ ಮತ್ತು ತೆಂಗಿನ ಗರಿಯನ್ನು ಅರಳಿಸಿ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಕಚೇರಿಯ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್, ಬೆಳ್ತಂಗಡಿ ವಿಭಾಗದ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಸುಳ್ಯ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ವಿಶ್ವನಾಥ ರೈ ಕಳಂಜ,ಸುಳ್ಯ ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷ ಯತೀಶ್ ರೈ ದುಗಲಡ್ಕ, ಅಡ್ಕಾರ್ ಸುಬ್ರಹ್ಮಣ್ಯ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ಕೇಂದ್ರ ಒಕ್ಕೂಟದ ನಿಯೋಜಿತ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಜನಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷರಾದ ಪಿ.ಸಿ.ಜಯರಾಮ, ಭವಾನಿಶಂಕರ ಅಡ್ತಲೆ, ಶ್ರೀಮತಿ ವಿಮಲಾರಂಗಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ವಿವಿಧ ಯೋಜನೆಯ ಅನುದಾನ ದ ಸೌಲಭ್ಯಗಳನ್ನು ವಿತರಿಸಲಾಯಿತು. ಕೇಂದ್ರ ಒಕ್ಕೂಟದ ನೂತನ ಪದಾಧಿಕಾರಿ ಸುರೇಶ್ ಕಣೆಮರಡ್ಕ ತಂಡಕ್ಕೆ ನಿಕಟ ಪೂರ್ವ ಅಧ್ಯಕ್ಷ ಯತೀಶ್ ರೈ ದುಗಲಡ್ಕ ರವರಿಂದ ಅಧಿಕಾರದ ಪದ ಪ್ರದಾನವನ್ನು ಯೋಜನೆಯ ಮುಖ್ಯ ನಿರ್ವಹಣಾ ಧಿಕಾರಿಯವರು
ನೆರವೇರಿಸಿದರು.
ಅಶಕ್ತ ಬಡಕುಟುಂಬಕ್ಕೆ ಮನೆಯ ಹಸ್ತಾಂತರ, ವಿಮಾ ಯೋಜನೆಯ ಫಲಾನುವಿಗಳಿಗೆ ಚೆಕ್ ವಿತರಣೆ,ಮಾಸಾಸನ ವಿತರಣೆ, ಶೌರ್ಯ ವಿಪತ್ತು ನಿರ್ವಹಣಾ ಘಟಕದವರಿಗೆ ಸಮವಸ್ತ್ರ ವಿತರಣೆ, ಕಾಯರ್ತೋಡಿ ರಕ್ತೇಶ್ವರೀ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಯೋಜನೆ ವತಿಯಿಂದ 2 ಲಕ್ಷ ದೇಣಿಗೆ ಚೆಕ್ ಹಸ್ತಾಂತರಿಸಲಾಯಿತು.


ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಹೊಸ ಜೀವನಕ್ಕೆ ಕಾಲಿಟ್ಟ ಸದಸ್ಯರನ್ನು ಗುಲಾಬಿ ಹೂ ನೀಡಿ ಅಭಿನಂದಿಸಲಾಯಿತು. ತಾಲೂಕಿನ ಕೇಂದ್ರ ಒಕ್ಕೂಟಗಳ ಸಾಧನೆಯ ವರದಿ ಮಂಡಿಸಲಾಯಿತು. ಒಕ್ಕೂಟದ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.
ನೂತನವಾಗಿ ಆಯ್ಕೆಯಾದ ಜನಜಾಗೃತಿ, ಒಕ್ಕೂಟದ ವಲಯಾಧ್ಯಕ್ಷರನ್ನು ಅಭಿನಂದಿಸಲಾಯಿತು.
ನಿಂತಿಕಲ್ಲು ವಲಯದ ಸೇವಾ ಪ್ರತಿನಿಧಿಗಳು ಪ್ರಾರ್ಥಿಸಿದರು. ಪ್ರಾದೇಶಿಕ ನಿರ್ದೇಶಕ ಪ್ರವೀಣ್ ಕುಮಾರ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು.ಸುಳ್ಯ ಯೋಜನಾಧಿಕಾರಿ ನಾಗೇಶ್ ಪಿ. ವಾರ್ಷಿಕ ಸಾಧನಾ ವರದಿ ವಾಚಿಸಿದರು. ಜಯಪ್ರಕಾಶ್ ವಂದಿಸಿದರು.ವಲಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು.

ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮ ಸೇರಿದ್ದು ಸಭಾಂಗಣ ತುಂಬಿತ್ತು. ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ತೆಂಗಿನ ಗರಿ ಮತ್ತು ಅಡಿಕೆ ಹಾಗೂ ಪೃಕೃತಿಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಸಂಘದ ಸದಸ್ಯರು ಆಕರ್ಷಕವಾಗಿ ವೇದಿಕೆಯನ್ನು ಅಲಂಕರಿಸಿದ್ದು ಅತಿಥಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಕೇಂದ್ರ ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿ ವೇದಿಕೆ ಪದಾಧಿಕಾರಿಗಳು , ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ಯೋಜನೆಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಸಂಘದ ಸದಸ್ಯರು ಸ್ವಯಂ ಸೇವಕ ರಾಗಿ ಸಹಕರಿಸಿದರು.