ಎನ್ನೆಂಸಿ: ವ್ಯವಹಾರ ಆಡಳಿತ ವಿಭಾಗದಿಂದ ಸತ್ವಂ ಆರ್ಗ್ಯಾನಿಕ್ ಮತ್ತು ನ್ಯಾಚುರಲ್ಸ್ ಗೆ ಭೇಟಿ

0

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವತಿಯಿಂದ ದ್ವಿತೀಯ ಬಿಬಿಎ ವಿದ್ಯಾರ್ಥಿಗಳಿಗೆ ಸುಳ್ಯದ ಸತ್ವಂ ಆರ್ಗ್ಯಾನಿಕ್ ಮತ್ತು ನ್ಯಾಚುರಲ್ಸ್ ಗೆ ವ್ಯವಹಾರ ಭೇಟಿ ಕಾರ್ಯಕ್ರಮವನ್ನು ಡಿಸೆಂಬರ್ 09 ರಂದು ಆಯೋಜಿಸಲಾಗಿತ್ತು.

ಸತ್ವಂ ಆರ್ಗ್ಯಾನಿಕ್ ಮತ್ತು ನ್ಯಾಚುರಲ್ಸ್ ನ ಮಾಲಕ ಸಾಯಿಚರಣ್ ತಮ್ಮ ವ್ಯವಹಾರದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ವ್ಯವಹಾರಿಕ ಜಾಣ್ಮೆ, ರೀತಿ – ನೀತಿಗಳು, ಕುಂದು ಕೊರತೆಗಳು, ಆರ್ಗ್ಯಾನಿಕ್ ಉತ್ಪನ್ನಗಳ ಉಪಯುಕ್ತತೆ, ಶೇಖರಿಸುವ ವಿಧಾನಗಳನ್ನು ಸ್ವ ಉದ್ಯೋಗದ ಉಪಯುಕ್ತತೆಗಳನ್ನು ವಿವರವಾಗಿ ತಿಳಿಸಿದರು. ಬಿಬಿಎ ವಿಭಾಗದ ಮುಖ್ಯಸ್ಥೆ ಶ್ರೀಮತಿ ಅನಂತಲಕ್ಷ್ಮಿ, ಉಪನ್ಯಾಸಕರುಗಳಾದ ಹರಿಪ್ರಸಾದ್ ಎ ವಿ, ಶ್ರೀಮತಿ ಲೀನಾ ವೈ ಎನ್ ಹಾಗೂ ಮೀನಾಕ್ಷಿ
ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.