ಪಯಸ್ವಿನಿ ಕೃಷಿ ಮೇಳ ಹಿನ್ನಲೆ : ಡಿ.16 ರಂದು ಸಂಜೆ ಜ್ಯೋತಿ ಸರ್ಕಲ್‌ನಿಂದ ಅದ್ದೂರಿ ಮೆರವಣಿಗೆ

0

ನಾಳೆಯಿಂದ ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ಪಯಸ್ವಿನಿ ಬೃಹತ್ ಕೃಷಿ ಮೇಳದ ಹಿನ್ನಲೆಯಲ್ಲಿ ಸಂಜೆಯ ಸಭಾ ಕಾರ್ಯಕ್ರಮಕ್ಕೆ ಮೊದಲು ಸುಳ್ಯದ ಜ್ಯೋತಿ ಸರ್ಕಲ್‌ನಿಂದ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಆರಂಭವಾಗುವ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಕಂಬಳದ ಕೋಣಗಳು, ಎನ್‌ಸಿಸಿ ಬ್ಯಾಂಡ್ ಹಾಗೂ ನಾಸಿಕ್ ಬ್ಯಾಂಡ್ ಇರಲಿವೆ ಎಂದು ವ್ಯವಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರಪ್ಪ ಗೌಡ ಕಣ್ಕಲ್ ಹಾಗು ಮೆರವಣಿಗೆ ಸಮಿತಿಯ ಸಂಚಾಲಕ ದೊಡ್ಡಣ್ಣ ಗೌಡ ಬರೆಮೇಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.