ಪಾಲಡ್ಕ ಬಳಿ ಅಪಘಾತ : ಬೈಕ್ ಸವಾರರಿಗೆ ಗಾಯ

0

ಅರಂಬೂರಿನ ಪಾಲಡ್ಕ ಬಳಿ ನಡೆದ ಅಫಘಾತದಲ್ಲಿ ಬೈಕ್ ಸವಾರರು ಗಾಯಗೊಂಡ ಘಟನೆ ವರದಿಯಾಗಿದೆ.
ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಾರೊಂದು, ದೀನ್‌ರಾಜ್ ದೊಡ್ಡಡ್ಕ ಹಾಗೂ ಪುರುಷೋತ್ತಮ ಕಂಜಿಪಿಲಿಯವರು ಪ್ರಯಾಣಿಸುತ್ತಿದ್ದ ಬೈಕ್‌ನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಸುಳ್ಯ ಕಡೆಗೆ ಬರುತ್ತಿದ್ದ
ಲಾರಿಗೆ ಡಿಕ್ಕಿ ಹೊಡೆಯಿತು.

ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ಗೆ ಕಾರ್ ತಾಗಿ ಬೈಕ್ ಪಲ್ಟಿಯಾಗಿ ಬೈಕ್ ಸವಾರರಿಬ್ಬರು ರಸ್ತೆಗೆ ಬಿದ್ದರೆನ್ನಲಾಗಿದೆ.
ದೀನರಾಜ್ ಅವರ ಪಕ್ಕೆಲುಬು ಹಾಗೂ ಪುರುಷೋತ್ತಮ ಕಂಜಿಪಿಲಿ ಅವರ ಮೂಗು ಮತ್ತು ತಲೆಗೆ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಯಿತು.