ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ. ಹಮೀದ್ ವಿರುದ್ಧ ಸೋಮಶೇಖಕರ ಕೊಯಿಂಗಾಜೆ ವಾಗ್ದಾಳಿ, ರಾಜೀನಾಮೆ ಹಿಂಪಡೆದಿದ್ದರೂ ದುರುದ್ದೇಶದಿಂದ ಅಂಗೀಕಾರ ; ಅಧ್ಯಕ್ಷರ ನಡೆ ಖಂಡನೀಯ

0

ಸಂಪಾಜೆ ಗ್ರಾಮ ಪಂಚಾಯತ್ ಗೆ ನಾಲ್ವರು ಸದಸ್ಯರು ರಾಜೀನಾಮೆ ನೀಡಿದ್ದು ಅದನ್ನು ಹಿಂಪಡೆಯಲು ಅರ್ಜಿ ಸಲ್ಲಿಸಿದ್ದರೂ ಸುಳ್ಳು ದಾಖಲೆ ಸೃಷ್ಠಿಸಿ ಮೂವರು ಸದಸ್ಯರನ್ನು ಅನರ್ಹಗೊಳಿಸಿರುವ ಕ್ರಮ ಸರಿಯಲ್ಲ. ಅದನ್ನು ಖಂಡಿಸುತ್ತೇವೆ. ದುzಶದಿಂದಲೇ ಅವರು ಈ ರೀತಿ ಮಾಡಿದ್ದಾರೆ ಎಂದು ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಸೋಮಶೇಖರ ಕೊಯಿಂಗಾಜೆ ಹೇಳಿದರು.
ಡಿ.೧೫ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನಾನು ನ.೨೪ರಂದು ವೈಯಕ್ತಿಕ ಕಾರಣಕ್ಕಾಗಿ ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೆ. ನ.೨೫ರಂದು ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೋನಾಲಿಸ, ಸದಸ್ಯರುಗಳಾದ ಶೌವಾದ್ ಗೂನಡ್ಕ, ವಿಮಲ ಪ್ರಸಾದ್ ರಾಜೀನಾಮೆ ನೀಡಿದ್ದರು. ಡಿ.೫ರಂದು ನಾವೆಲ್ಲರೂ ರಾಜೀನಾಮೆ ಹಿಂಪಡೆಯಲು ಪಂಚಾಯತ್‌ಗೆ ಹೋಗಿ ಅರ್ಜಿ ಸಲ್ಲಿಸಿದ್ದು, ಅದು ಅದೇ ದಿನಾಂಕದಂದು ಪಂಚಾಯತ್ ದಾಖಲಾತಿ ಪುಸ್ತಕದಲ್ಲೂ ನಮೂದಿಸಲಾಗಿದೆ. ನನ್ನ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಆದರೆ ಮೂವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಹೇಳುತ್ತಾರೆ. ಇದು ಮಾಧ್ಯಮದ ಮೂಲಕವೇ ನಮಗೆ ಗೊತ್ತಾದುದು ಹೊರತು ಯಾವುದೇ ಸೂಚನೆಗಳು ನಮಗೆ ಬಂದಿಲ್ಲ. ಪಂಚಾಯತ್ ಅಧ್ಯಕ್ಷರು ೧೫ ದಿನ ಆಗುವವರೆಗೆ ಕಾದು, ರಾಜೀನಾಮೆ ಪತ್ರಗಳಲ್ಲಿ ಸ್ಪಷ್ಟ ಷರಗಳನ್ನು ಬರೆಯದೇ ಅಧ್ಯಕ್ಷರು ಇಲ್ಲದ ಕಾನೂನನ್ನು ಸೃಷ್ಠಿಸಿಕೊಂಡು ದುzಶದಿಂದಲೇ ರಾಜೀನಾಮೆ ಹಿಂಪಡೆಯಲು ಅರ್ಜಿ ಸಲ್ಲಿಸಿದರೂ ಅದನ್ನು ಅಂಗೀಕಾರ ಮಾಡಿದ್ದಾರೆ. ಈ ರೀತಿಯ ನಡೆ ಸರಿಯಲ್ಲ. ಪಂಚಾಯತ್‌ನಲ್ಲಿ ನಡೆಯುವ ಭ್ರಷ್ಟಾಚಾರವನ್ನು ಪ್ರಶ್ನಿಸುವ ಸದಸ್ಯರು ಇರಬಾರದೆಂಬ ದೃಷ್ಠಿಯಿಂದ ಈ ರೀತಿ ಅಧ್ಯಕ್ಷರು ಮಾಡಿದ್ದಾರೆ ಎಂದು ಸೋಮಶೇಖರ್ ಕೊಯಿಂಗಾಜೆ ಆರೋಪಿಸಿದರು.


ಅಧಿಕಾರ ಹೆಗಲಿಗೆ ಏರಬೇಕೇ ಹೊರತು ಅದು ತಲೆಗೆ ಹತ್ತಿದರೆ ಈ ರೀತಿ ಆಗುತ್ತದೆ. ಪಂಚಾಯತ್ ಚುನಾವಣೆಗಳು ಪಕ್ಷದ ಚೆಹ್ನೆಯಡಿಯಲ್ಲಿ ನಡೆಯುವುದಿಲ್ಲ ಎನ್ನುವುದು ಗೊತ್ತಿದೆ. ಆದರೆ ನಾವೆಲ್ಲರೂ ಒಂದು ಪಕ್ಷದ ಬೆಂಬಲಿಗರಾಗಿಯೇ ಚುನಾವಣೆಗೆ ನಿಂತಿರುವುದು. ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ. ಹಮೀದ್ ಹಾಗು ಅವರಿಗೆ ಬೆಂಬಲ ನೀಡುವ ಪಂಚಾಯತ್ ಸದಸ್ಯರುಗಳು ತಾಕತ್ತಿದ್ದರೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಲಿ. ಜನರು ಯಾರ ಪರ ಇದ್ದಾರೆಂದು ಗೊತ್ತಾಗುತ್ತದೆ. ಇದು ನಾನವರಿಗೆ ಹಾಕುತ್ತಿರುವ ಸವಾಲು ಎಂದು ಅವರು, ಪಂಚಾಯತ್‌ನಲ್ಲಿ ಏನೆಲ್ಲ ಭ್ರಷ್ಟಾಚಾರಗಳು ಆಗುತ್ತಿದೆ ಎನ್ನುವುದನ್ನು ಮುಂದಿನ ದಿನದಲ್ಲಿ ದಾಖಲೆ ಸಮೇತ ನಾನೇ ತೋರಿಸುತ್ತೇನೆ'' ಎಂದು ಹೇಳಿದರು. 'ನಾವು ನೀಡಿರುವ ರಾಜೀನಾಮೆಗಳು ಅಂಗೀಕಾರ ಮಾಡಿದ್ದರೂ ಅದು ಸಿಂಧುವಾಗುವುದಿಲ್ಲ. ಪಂಚಾಯತ್ ನಿಯಮದಲ್ಲಿ ಇಲ್ಲದ ಕಾನೂನನ್ನು ಇವರು ಮಾಡುತ್ತಿದ್ದಾರಷ್ಠೆ. ನಿನ್ನೆಯಷ್ಟೆ ನಾವು ಪುತ್ತೂರು ಸಹಾಯಕ ಕಮಿಷನರ್‌ರನ್ನು ಸಂಪರ್ಕಿಸಿ ಚರ್ಚೆ ನಡೆಸಿzವೆ. ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. ನಮಗೆ ಕಾನೂನಿನ ಮೇಲೆ ಸಂಪೂರ್ಣ ವಿಶ್ವಾಸವಿದೆ. ಬೋಗಸ್ ದಾಖಲೆಯನ್ನು ಸೃಷ್ಠಿಸಿರುವ ಪಂಚಾಯತ್ ಅಧ್ಯಕ್ಷರ ವಿರುದ್ಧ ನಾವು ಮಾನನಷ್ಟ ಮೊಕ್ಕದಮೆ ಹೂಡುತ್ತೇವೆ. ಅವರ ಸದಸ್ಯತ್ವವನ್ನೇ ರದ್ಧಗೊಳಿಸಬೇಕೆಂದು ಹೈಕೋರ್ಟು ಮೆಟ್ಟಿಲೇರುತ್ತೇವೆ” ಎಂದು ಹೇಳಿದ ಅವರು, ಸಂಪಾಜೆಯಲ್ಲಿ ಕುತಂತ್ರ ಮಾಡುವವರ ರಾಜಕೀಯವನ್ನು ಮಟ್ಟ ಹಾಕುವುದೇ ನನ್ನ ಮುಂದಿನ ನಡೆ ಎಂದು ಹೇಳಿದರು.
ಪತ್ರಿಕಾಗೋಷ್ಠೀಯಲ್ಲಿ ಲಿಸ್ಸಿ ಮೋನಾಲಿಸ, ಶೌವಾದ್ ಗೂನಡ್ಕ, ವಿಮಲ ಪ್ರಸಾದ್ ಇದ್ದರು.