ಟಿ.ಎಂ.ಶಹೀದ್ ವಿರುದ್ಧ ಅಸಮಾಧಾನ, ಸಂಪಾಜೆಯಲ್ಲಿ ಪಕ್ಷ ಕಟ್ಟಿ ಆಡಳಿತಕ್ಕೆ ತರಲಿ – ಅದು ತಾಕತ್ತು : ಸವಾಲೆಸೆದ ಕೊಯಿಂಗಾಜೆ

0

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಬೆಂಬಲಿಸುತ್ತಿರುವುದೇ ಟಿ.ಎಂ. ಶಹೀದ್. ಅವರು ಸಂಪಾಜೆಯಲ್ಲಿ ಪಕ್ಷವನ್ನು ಕಟ್ಟಿ ಆಡಳಿತಕ್ಕೆ ತರಬೇಕೆ ಹೊರತು ಪಕ್ಷವನ್ನು ಒಡೆಯುವ ಕೆಲಸ ಮಾಡುವುದು ಸರಿಯಲ್ಲ” ಎಂದು ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ, ಪಂಚಾಯತ್ ಸದಸ್ಯರೂ ಆಗಿರುವ ಸೋಮಶೇಖರ ಕೊಯಿಂಗಾಜೆ ಹೇಳಿದ್ದಾರೆ.
ಸಂಪಾಜೆ ಗ್ರಾ.ಪಂ. ಸದಸ್ಯರ ರಾಜೀನಾಮೆ ಅಂಗೀಕಾರ ವಿಚಾರವಾಗಿ ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.


“ಹಮೀದ್‌ರನ್ನು ಬೆಂಬಲಿಸುವುದು ಟಿ.ಎಂ. ಶಹೀದ್. ಇದು ಪಕ್ಷದ ನಾಯಕರ ಗಮನಕ್ಕೆ ಬಂದಿದೆ. ಮಾಧ್ಯಮದ ಜತೆಗೆ ಮಾತ್ರ ಶಹೀದ್ ಅವರು ನಾನು ಅವರ ಜತೆಗಿಲ್ಲ ಎಂದು ಹೇಳುತ್ತಾರೆ. ಆದರೆ ಅವರು ಏನು ಕಾರ್ಯ ಮಾಡುತ್ತಾರೆ ಎನ್ನುವುದನ್ನು ನಾನು ಗಮನಿಸುತ್ತಿzನೆ. ಶಹೀದ್ ಅವರು ಪಕ್ಷವನ್ನು ಸಂಪಾಜೆಯಲ್ಲಿ ಕಟ್ಟಿ ಆಡಳಿತಕ್ಕೆ ತರಲಿ. ಅದು ತಾಕತ್ತು. ಪಕ್ಷವನ್ನು ಒಡೆಯುವವನು ನಾಯಕನಾಗುವುದಿಲ್ಲ ಎಂದು ಹೇಳಿದರು.