ಕನಕಮಜಲು: ಭಜನಾ ಮಹೋತ್ಸವ ಪ್ರಯುಕ್ತ ಸ್ಥಳೀಯ ಭಜನಾ ತಂಡಗಳ ಸಭೆ

0

ಕನಕಮಜಲು ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ ಮುಂದಿನ ಫೆಬ್ರವರಿ 1,2,3 ನೇ ದಿನಾಂಕದಂದು ಜರಗುವ 50ನೇ ವರ್ಷದ ಏಕಾಹ ಭಜನಾ ಮಹೋತ್ಸವದ ಪ್ರಯುಕ್ತ ಕನಕಮಜಲಿನ ಸ್ಥಳೀಯ ಭಜನಾ ತಂಡಗಳ ಸಭೆ ಡಿ.4ರಂದು ಜರಗಿತು. ಭಜನಾ ಮಂಡಳಿಯ ಆಡಳಿತ ಮಂಡಳಿ ಹಾಗೂ ಭಜನಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಜರಗಿದ ಸಭೆಯಲ್ಲಿ ಸ್ವರ್ಣಾಂಜಲಿ ಭಜನಾ ಮಂಡಳಿ ಅಡ್ಕಾರು, ಪೆರುಂಬಾರು. ಸ್ವರ್ಣ ಮಹಿಳಾ ಮಂಡಲ ಕನಕಮಜಲು. ಯುವಕ ಮಂಡಲ (ರಿ) ಕನಕಮಜಲು. ಕೊರಗಜ್ಜ ಸನ್ನಿಧಿ ಮಳಿ. ಕನಕದಾಸ ಮಕ್ಕಳ ಭಜನಾ ತಂಡ ಕನಕಮಜಲು. ಸಂಜೀವಿನಿ ಭಜನಾ ತಂಡ ಪಂಜಿಗುಂಡಿ. ಗಬ್ಬಲಡ್ಕ ಭಜನಾ ತಂಡ ಕನಕಮಜಲು, ವಾಸುಕಿ ಸೇವಾ ಸಮಿತಿ ಸಾರಕೂಟೇಲು ಇದರ ಪದಾಧಿಕಾರಿಗಳು ಭಾಗವಹಿಸಿದ್ದರು.