ಕಲ್ಲಪಳ್ಳಿ ಗಡಿ ಪ್ರದೇಶದ ಕಾಂಕ್ರೀಟ್ ರಸ್ತೆ ಸಚಿವ ಅಂಗಾರ ರಿಂದ ಉದ್ಘಾಟನೆ, ಬಡ್ಡಡ್ಕ ಕೂರ್ನಡ್ಕ ರಸ್ತೆ ಕಾಮಗಾರಿಗೆ ಮುಂದಿನ ವಾರ ಚಾಲನೆ

0

ಆಲೆಟ್ಟಿ ಬಡ್ಡಡ್ಕ ಕಲ್ಲಪಳ್ಳಿ ಬಾಟೋಳಿ ರಸ್ತೆಯ ಗಡಿ ಪ್ರದೇಶದಲ್ಲಿ ಸುಮಾರು 100‌ ಮೀಟರ್ ನಷ್ಟು ಕಾಂಕ್ರೀಟ್ ಕಾಮಗಾರಿ ಕೆಲಸ ಸಂಪೂರ್ಣ ಗೊಂಡಿದ್ದು ಡಿ.14 ರಂದು ಸಚಿವರು ಉದ್ಘಾಟಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿದರು.


ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ರವರು ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ
” ಗಡಿ ಭಾಗದ ಸಮಸ್ಯೆಯನ್ನು ಇತ್ಯರ್ಥ ಪಡಿಸುವ ಸಲುವಾಗಿ ಈಗಾಗಲೇ ಜಂಟಿ ಸರ್ವೆ ಕಾರ್ಯ ನಡೆಸಿ ಕರ್ನಾಟಕ ಭಾಗಕ್ಕೆ ಸೇರಿದ ಬಾಟೋಳಿ ಈ ಪ್ರದೇಶದ ಬಹಳ ವರ್ಷದ ಬಹು ಮುಖ್ಯ ಬೇಡಿಕೆಯನ್ನು ವಿಶೇಷ ಮುತುವರ್ಜಿಯಿಂದ ಇತ್ಯರ್ಥ ಪಡಿಸಲಾಗಿದೆ. ಈ ಭಾಗದ ಬಹು ಬೇಡಿಕೆ ಯ ಆಲೆಟ್ಟಿ ಬಡ್ಡಡ್ಕ ಕೂರ್ನಡ್ಕ ರಸ್ತೆ ಕಾಮಗಾರಿ ಕೆಲಸ ಮುಂದಿನ ವಾರದಲ್ಲಿ ಪ್ರಾರಂಭಿಸಲಾಗುವುದು. ಈಗಾಗಲೇ 1.40 ಕೋಟಿ ಅನುದಾನ ಬಿಡುಗಡೆಯಾಗಿದೆ. ಹೆಚ್ಚುವರಿಯಾಗಿ ರೂ. 1 ಕೋಟಿ ವಿಶೇಷ ಅನುದಾನ ಒದಗಿಸಿಕೊಡುವುದಾಗಿ ಈ ಸಂದರ್ಭದಲ್ಲಿ ಸಚಿವರು ಭರವಸೆ ನೀಡಿದರು.


ಈ ಸಂದರ್ಭದಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷಎನ್.ಎ.ರಾಮಚಂದ್ರ, ಆಲೆಟ್ಟಿ ಸೊಸೈಟಿ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ನಿರ್ದೇಶಕ ಜಯಪ್ರಕಾಶ್ ಕುಂಚಡ್ಕ, ಆಲೆಟ್ಟಿ ಪಂಚಾಯತ್ ಸದಸ್ಯರಾದ ಶಿವಾನಂದ ರಂಗತ್ತಮಲೆ, ಭಾಗೀರಥಿ ಪತ್ತುಕುಂಜ, ಮಾಜಿ ಅಧ್ಯಕ್ಷ ಧನಂಜಯ ಕುಂಚಡ್ಕ, ಹರೀಶ್ ರಂಗತ್ತಮಲೆ,
ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಸುನಿಲ್ ಕೇರ್ಪಳ,ಜಿಲ್ಲಾ ಬಿಜೆಪಿ ‌ಉಪಾಧ್ಯಕ್ಷ ವೆಂಕಟ್ ವಳಲಂಬೆ,
ಪನತ್ತಡಿ ಪಂಚಾಯತ್ ಬಿಜೆಪಿ ಮಂಡಲ ಅಧ್ಯಕ್ಷ ವೇಣುಗೋಪಾಲ್ ಕೆ. ಕೆ, ಕಲ್ಲಪಳ್ಳಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ನಂದಕುಮಾರ್ ಬಾಟೋಳಿ, ಬಡ್ಡಡ್ಕ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಪುಂಡರೀಕ ಕಾಪುಮಲೆ, ಆಲೆಟ್ಟಿ ಪಂಚಾಯತ್ ಪಿ.ಡಿ.ಒ ಕೀರ್ತಿ ಪ್ರಸಾದ್, ಸ್ಥಳೀಯ ಬಿಜೆಪಿ ಮುಖಂಡರಾದ ಬಾಲಚಂದ್ರ ಪಿ.ಕೆ, ರಾಜ್ ಗೋಪಾಲ್ ಭಟ್, ಜಗದೀಶ್ ಸರಳಿಕುಂಜ, ಗಂಗಾಧರ ಪತ್ತುಕುಂಜ, ಕೇಶವ ಬಾಟೋಳಿ, ಹೇಮನಾಥ ಬಡ್ಡಡ್ಕ, ಗಂಗಾಧರ ಬಡ್ಡಡ್ಕ, ಗುತ್ತಿಗೆದಾರ ಪುನೀತ್ ಕುಂಚಡ್ಕ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಸ್ತೆ ಕಾಮಗಾರಿಗೆ ಅವಿರತವಾಗಿ ಶ್ರಮವಹಿಸಿ ದ ಸುಧಾಕರ ಬೆಳ್ಳೂರು ರವರನ್ನು ಎನ್.ಎ.ರಾಮಚಂದ್ರ ರವರು ಹಾರಾರ್ಪಣೆ ಮಾಡಿ ಅಭಿನಂದಿಸಿದರು. ಸ್ಥಳೀಯ ಬಿಜೆಪಿ ಮುಖಂಡ ಉದ್ಯಮಿ ಸುಧಾಕರ ಬೊಳ್ಳೂರು ಸರ್ವರನ್ನೂ ಸ್ವಾಗತಿಸಿದರು. ಜಯಪ್ರಕಾಶ್ ಪೆರುಮುಂಡ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ನಾಗರಿಕರು ಭಾಗವಹಿಸಿದರು.