ಬೈತಡ್ಕ: ಬ್ರೇಕ್ ವೈಫಲ್ಯದಿಂದ ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಪಲ್ಟಿ : ಜಖಂ

0

ಬ್ರೇಕ್ ವೈಫಲ್ಯದಿಂದಾಗಿ ಕಂಟೈನರ್ ಲಾರಿಯೊಂದು ಪಲ್ಟಿಯಾದ ಘಟನೆ ಜಾಲ್ಸೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ಡಿ.15ರಂದು ರಾತ್ರಿ ಸಂಭವಿಸಿದೆ.


ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕಂಟೈನರ್ ಲಾರಿ ಬೈತಡ್ಕದ ತಿರುವಿನ ಇಳಿಜಾರಿನಲ್ಲಿ ಬ್ರೇಕ್ ವೈಫಲ್ಯದಿಂದ ರಸ್ತೆಯ ಎಡಭಾಗಕ್ಕೆ ಪಲ್ಟಿಯಾಗಿದ್ದು, ಕಂಟೈನರ್ ನಲ್ಲಿ ಚಾಲಕ ಮಾತ್ರವಿದ್ದು ಚಾಲಕನ ಕೈಗೆ ಗಾಯವಾಗಿರುವುದಾಗಿ ತಿಳಿದುಬಂದಿದೆ.