ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಚಪ್ಪರ ಮುಹೂರ್ತ, ಡಿ.19 ರಂದು ಬೀದಿ ಕಲ್ಲುರ್ಟಿ ದೈವದ ಬಾಲಾಲಯ ಪ್ರತಿಷ್ಠೆ

0

ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆಯ ಪ್ರಯುಕ್ತ ಚಪ್ಪರ ಮುಹೂರ್ತ ಡಿ.16 ರಂದು ದೇವಾಲಯದಲ್ಲಿ ನಡೆಯಿತು.

ಉದ್ಭವ ಶ್ರೀ ಜಲದುರ್ಗಾದೇವಿ, ಗಣಪತಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಧಾನ‌ ಅರ್ಚಕ ಶ್ರೀನಿವಾಸ ಹೆಬ್ಬಾರ್ ಅವರ ನೇತೃತ್ವದಲ್ಲಿ ಚಪ್ಪರ ಮುಹೂರ್ತದ ಪೂಜೆ ನೆರವೇರಿತು.

ಇಪ್ಪತ್ತೊಂದು ಗ್ರಾಮಗಳ ವ್ಯಾಪ್ತಿಗೆ ಒಳಪಟ್ಟಿರುವ ಶ್ರೀ ಕ್ಷೇತ್ರದಲ್ಲಿ ಜ.16 ರಿಂದ 21 ರ ತನಕ ಜಾತ್ರೆ ನಡೆಯಲಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದ ಪೂರ್ವಭಾವಿ ಸಿದ್ಧತೆಗಳು ಚಪ್ಪರ ಮುಹೂರ್ತ ಮೂಲಕ‌ ಚಾಲನೆ ದೊರೆತಿದೆ.

ಡಿ.19 : ಬಾಲಾಲಯ ಪ್ರತಿಷ್ಠೆ
ಶ್ರೀ ಕ್ಷೇತ್ರದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಬೀದಿ ಕಲ್ಲುರ್ಟಿ ದೈವದ ಬಾಲಾಲಯ ಪ್ರತಿಷ್ಠೆಯು ಡಿ.19 ರಂದು ಬೆಳಗ್ಗೆ 8.30 ಕ್ಕೆ ನಡೆಯಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಎಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಸದಸ್ಯ ಜಗನ್ನಾಥ ರೈ ಪೆರುವಾಜೆ, ಅಮರನಾಥ ಶೆಟ್ಟಿ ಪೆರುವಾಜೆಗುತ್ತು, ಮಾಜಿ‌ ಅಧ್ಯಕ್ಷ ನಿರಂಜನ ಶೆಟ್ಟಿ ಪಾಲ್ತಾಡು, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯೆ ಸುಜಾತ ಪದ್ಮನಾಭ ಶೆಟ್ಟಿ, ಕ್ಷೇತ್ರದ ವ್ಯವಸ್ಥಾಪಕ ವಸಂತ ಆಚಾರ್ಯ ಪೆರುವಾಜೆ, ಸುದಾನಂದ ಮಣಿಯಾಣಿ, ಮೋನಪ್ಪ ಪೂಜಾರಿ, ಬಾಲಕೃಷ್ಣ ಆಚಾರ್ಯ, ಪ್ರಶಾಂತ್ ರೈ, ಗಣೇಶ್ ಪೂಜಾರಿ, ಹರ್ಷಿತ್ ಪೆರುವಾಜೆ, ಪೂರ್ಣಿಮಾ, ಯಶೋಧಾ, ನಾರಾಯಣ ರೈ, ಸುರೇಶ್ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.